Posts

ಶಿಡ್ಲಘಟ್ಟ: ಮೇಲ್ ಮರವತ್ತೂರ್ ಓಂಶಕ್ತಿ ದರ್ಶನಕ್ಕಾಗಿ ಉಚಿತ ಬಸ್ ವ್ಯವಸ್ಥೆ ಮಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ

Image
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಓಂ ಶಕ್ತಿ ಮಾಲಾಧಾರಿಗಳು (ಭಕ್ತಾದಿಗಳ) ವಿನಂತಿಯಂತೆ, ಅಮ್ಮ ಶಕ್ತಿಪೀಠ ಮೇಲ್ ಮರವತ್ತೂರ್ ಓಂಶಕ್ತಿ ದೇವಸ್ಥಾನದ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಉಚಿತ ಬಸ್ ಸೇವೆ ಒದಗಿಸಲು ಕೋರಿರುವ ಹಿನ್ನೆಲೆಯಲ್ಲಿ.  ತಾಲೂಕಿನಾದ್ಯಂತ ಅವಶ್ಯಕತೆ ಇರುವಂತಹ ಬಡವರಿಗೆ ದೇವರ ದರ್ಶನ ಪಡೆಯಲು "ಲಕ್ಸುರಿ ಬಸ್" ವ್ಯವಸ್ಥೆ ಮಾಡಿ ಭಕ್ತಾದಿಗಳ ಓಂಶಕ್ತಿ ಅಮ್ಮನ ದರ್ಶನವನ್ನು ಪಡೆಯಲು ಅನುವು ಮಾಡಿಕೊಡುತ್ತಿರುವ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಕೋ-ಅರ್ಡಿನೇಟರ್ ರಾಜೀವ್ ಗೌಡರು ಭಾನುವಾರ ತಮಿಳುನಾಡಿನ ಮೇಲ್ ಮರವತ್ತೂರಿಗೆ ಹೋರಡಲು ನೂರಾರು ಓಂ ಶಕ್ತಿ ಮಾಲದಾರಿಗಳಿಗೆ ಶಿಡ್ಲಘಟ್ಟ ನಗರದಿಂದ ನೂರಾರು ಭಕ್ತಾದಿಗಳಿಗೆ ಹತ್ತಾರು ಬಸ್ ಗಳನ್ನು ವ್ಯವಸ್ಥೆ ಮಾಡಿ ನಗರದ ಶ್ರೀ ಪೂಜಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಸುಗಮ ಪ್ರಯಾಣ ಮಾಡಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಭಕ್ತಾದಿಗಳು ಅಮ್ಮನ ಕಿರು ದರ್ಶನವನ್ನು ಪಡೆದು ಧನ್ಯತೆ ಅನುಭವಿಸಲು ಶುಭಾಶಯಗಳನ್ನು ತಿಳಿಸಿದರು.  ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮಿಳುನಾಡಿನ ಮೇಲ್ ಮರುವತ್ತೂರಿಗೆ ಪ್ರಯಾಣ ಮಾಡಿ ತಾಯಿ ಓಂ ಶಕ್ತಿಯ ದರ್ಶನವನ್ನು ಪಡೆಯಲು ಸಜ್ಜ...

ಎರಡನೇ ವರ್ಷದ ಶ್ರೀ ರಾಮ ಶೋಭಾಯಾತ್ರೆ ಜೂನ್ 9 ರಂದು ಆಚರಣೆ

Image
  ಶಿಡ್ಲಘಟ್ಟ:ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೂಲಕ ದೇಶದಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯವನ್ನು ದೇಶ ವಾಸಿಗಳಿಗೆ ದಯಪಾಲಿಸುತ್ತಿರುವ ರಾಮಚಂದ್ರ ಪ್ರಭುವಿನ ಎರಡನೇ ವರ್ಷದ ಶ್ರೀ ರಾಮ ಶೋಭಾಯಾತ್ರೆಯನ್ನು ಶಿಡ್ಲಘಟ್ಟ ನಗರದಲ್ಲಿ ಆಚರಿಸುವ ಸಲುವಾಗಿ ಮೇ 4 ಶನಿವಾರ ಪೂರ್ವಭಾವಿ ಸಭೆಯನ್ನು ಹಂಡಿಗನಾಳ ಕೆವಿ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಭಜರಂಗದಳ ವಿಶ್ವಹಿಂದೂ ಪರಿಷತ್ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಹಿಂದೂ ಧರ್ಮದ ಮುಖಂಡರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.  ಲೋಕಸಭಾ ಚುನಾವಣೆ ಇರುವುದರಿಂದ ದೇಶದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣೆಯ ಫಲಿತಾಂಶ ಜೂನ್ 4 ರ ನಂತರ ಯಾವುದೇ ಅಡಚಣೆ ಇಲ್ಲದೆ ಜೂನ್ 9 ರಂದು ಬಹಳ ಅದ್ದೂರಿಯಾಗಿ ಶ್ರೀ ರಾಮ ಶೋಭಾಯಾತ್ರೆ ಆಚರಣೆ ಮಾಡಲು ಎಲ್ಲಾರೂ ಒಕ್ಕೊರಲಿನಿಂದ ಒಮ್ಮತ ನೀಡಿ ದಿನಾಂಕವನ್ನು ನಿಗದಿಪಡಿಸಲಾಗಿದೆ.  ಕಾರ್ಯಕ್ರಮದ ರೂಪುರೇಷೆಗಳನ್ನು ಮಾತನಾಡಲು ಇದೇ ಮೇ 6  ಸೋಮವಾರ ರಂದು ಮತ್ತೊಮ್ಮೆ ಬೈಟೇಕ್ ಅನ್ನು  ಕರೆಯಲಾಗಿದೆ ಎಲ್ಲಾ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರಾಮ ಶೋಭಾಯಾತ್ರೆಯು ವೈಭವದಿಂದ ನಡೆಯಲು ಸಲಹೆ ಸೂಚನೆಗಳನ್ನು ನೀಡಬೇಕೆಂದು ಹಿಂದೂ ಧರ್ಮದ ಮುಖಂಡರು ತಿಳಿಸಿದ್ದಾರೆ. ವಿಶೇಷ ಸೂಚನೆ : ಶ್ರೀ ರಾಮ...

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ

Image
ಇಡೀ ನಾಗರಿಕ ಸಮಾಜವೇ ಬೆಚ್ಚಿಬೀಳುವಂತ ಘಟನೆ ಹಾಸನದಲ್ಲಿ ನಡೆದಿದೆ. ಪೆನ್‌ಡ್ರೈವ್ ಮುಖಾಂತರ ಮಹಿಳೆಯರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಿ ವಾಟ್ಸ್‌ಆಪ್ ಮೂಲಕ ವ್ಯಾಪಕವಾಗಿ ಹರಡಲಾಗುತ್ತಿದೆ.  ದೇಶದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ರವರ ಮೊಮ್ಮಗ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರನ್ನು ಅಕ್ರಮವಾಗಿ ಲೈಂಗಿಕವಾಗಿ ಬಳಸಿಕೊಂಡು ಅವರ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಆ ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಬದುಕು ಛಿದ್ರಗೊಂಡಿದೆ. ಆದರೆ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅವರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುವ ಪ್ರಭಾವಿ ವ್ಯಕ್ಯಿ ಹಾಗು ಮಹಿಳೆಯರ ಖಾಸಗಿ ಲೈಂಗಿಕ ದೃಶ್ಯಗಳನ್ನು ಸಾರ್ವಜನಿಕವಾಗಿ ಹರಡುತ್ತಿರವ ವ್ಯಕ್ತಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಇಂತಹ ವಿಕ್ಷಿಪ್ತ ಮತ್ತು ವಿಕೃತ ಲೈಂಗಿಕ ಅಕ್ರಮದಿಂದಾಗಿ ಈ ರಾಜ್ಯದ ಜನತೆ  ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಜಿಲ್ಲೆಯ ಪ್ರಭಾವಿ ವ್ಯಕ್ತಿ ಮತ್ತು ಆ ದೃಶಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿ ಮಹಿಳೆಯರ ಖಾಸಗಿ ಬದುಕಿಗೆ ದಕ್ಕೆ ತಂದಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಶಿಕ್ಷ...

ಸರ್ಕಾರಿ ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ:- ದ ಸಂ ಸ ಮನವಿ

Image
*ಶಿಡ್ಲಘಟ್ಟ* ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆನೇಕ ರೀತಿಯ ಅವ್ಯವಸ್ಥೆಗಳು ಹಾಗೂ ಸಮಸ್ಯೆಗಳು ತಾಂಡವವಾಡುತ್ತಿದ್ದು ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳು, ಗರ್ಭಿಣಿಯರು,ಅಂಗವಿಕಲರು, ವೃದ್ಧರಿಗೆ, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಕೂಡಾ ಅನೇಕ ರೀತಿಯಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಂದ  ತೊಂದರೆ ಉಂಟಾಗಿರುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್.ಎ.ವೆಂಕಟೇಶ್ (ವೆಂಕಿ) ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ನಂತರ ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಇರುವ ಸಮಸ್ಯೆಗಳ ಪಟಿಯನ್ನು ಓದುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರು ತೊಂದರೆಗಳನ್ನು ಜಿಲ್ಲಾ ಆರೋಗ್ಯ ಧಿಕಾರಿಗಳಿಗೆ ಮನವರಿಕೆ ಮಾಡಿದರು *ಆಸ್ಪತ್ರೆ ಯಲ್ಲಿರುವ ಸಮಸ್ಯೆಗಳು* 01. ಗರ್ಭಿಣಿಯರು ಹೆರಿಗೆಗೆ ಬಂದಾಗ ಸರಿಯಾಗಿ ಪರೀಕ್ಷಿಸದೆ ಬೇರೆ ಆಸ್ಪತ್ರೆಗೆ ಹೋಗಲು ಶಿಫಾರಸ್ಸು ಮಾಡುತ್ತಿದ್ದಾರೆ. ಇದರಿಂದ ಬಡವರು ದಿಕ್ಕು ತೋಚದೆ ತೊಂದರೆಗೆ ಒಳಗಾಗಿ ಆನೇಕ ಸಲ ಬೇರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆದಲ್ಲಿಯೇ ಸಾಮಾನ್ಯ ಹೆರಿಗೆ ಆಗಿರುತ್ತದೆ 2 ಸಂಜೆ ವೇಳೆಯಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲ, ಕರ್ತವ್ಯ ನಿರತ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವು...

ಶಿಡ್ಲಘಟ್ಟದಲ್ಲಿ ನರೇಗಾ ದಿನಾ ಆಚರಣೆ

ಶಿಡ್ಲಘಟ್ಟ : ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಮಹಾತ್ಮ ಗಾಂಧಿ ನರೇಗಾ ದಿನಾಚರಣೆಯ ಅಂಗವಾಗಿ ಮಹಾತ್ಮ ಗಾಂಧಿಜೀ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಮತ್ತು ಮಾನ್ಯ ನರೇಗಾ ಸಹಾಯಕ ನಿರ್ದೇಶಕರು ನರೇಗಾ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ನರೇಗಾ ಯೋಜನೆಯಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಯವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜ, ನರೇಗಾ ಸಹಾಯಕ ನಿರ್ದೇಶಕರಾದ ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು ರಮಾಕಾಂತ್, ಪ್ರಸಾದ್, ಮಂಜುಳಮ್ಮ, ತಾಲ್ಲೂಕು ನರೇಗಾ ಟಿ.ಸಿ, ಟಿಎಂಐಎಸ್, ಟಿಐಇಸಿ, ಜೆಇ ಗಳು, ಬಿಎಫ್ ಟಿಗಳು, ಜಿಕೆಎಂ ಗಳು ಹಾಗೂ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹ ಹಾಜರಿದ್ದರು.