ಶಿಡ್ಲಘಟ್ಟ: ಮೇಲ್ ಮರವತ್ತೂರ್ ಓಂಶಕ್ತಿ ದರ್ಶನಕ್ಕಾಗಿ ಉಚಿತ ಬಸ್ ವ್ಯವಸ್ಥೆ ಮಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಓಂ ಶಕ್ತಿ ಮಾಲಾಧಾರಿಗಳು (ಭಕ್ತಾದಿಗಳ) ವಿನಂತಿಯಂತೆ, ಅಮ್ಮ ಶಕ್ತಿಪೀಠ ಮೇಲ್ ಮರವತ್ತೂರ್ ಓಂಶಕ್ತಿ ದೇವಸ್ಥಾನದ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಉಚಿತ ಬಸ್ ಸೇವೆ ಒದಗಿಸಲು ಕೋರಿರುವ ಹಿನ್ನೆಲೆಯಲ್ಲಿ.
 ತಾಲೂಕಿನಾದ್ಯಂತ ಅವಶ್ಯಕತೆ ಇರುವಂತಹ ಬಡವರಿಗೆ ದೇವರ ದರ್ಶನ ಪಡೆಯಲು "ಲಕ್ಸುರಿ ಬಸ್" ವ್ಯವಸ್ಥೆ ಮಾಡಿ ಭಕ್ತಾದಿಗಳ ಓಂಶಕ್ತಿ ಅಮ್ಮನ ದರ್ಶನವನ್ನು ಪಡೆಯಲು ಅನುವು ಮಾಡಿಕೊಡುತ್ತಿರುವ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಕೋ-ಅರ್ಡಿನೇಟರ್ ರಾಜೀವ್ ಗೌಡರು ಭಾನುವಾರ ತಮಿಳುನಾಡಿನ ಮೇಲ್ ಮರವತ್ತೂರಿಗೆ ಹೋರಡಲು ನೂರಾರು ಓಂ ಶಕ್ತಿ ಮಾಲದಾರಿಗಳಿಗೆ ಶಿಡ್ಲಘಟ್ಟ ನಗರದಿಂದ ನೂರಾರು ಭಕ್ತಾದಿಗಳಿಗೆ ಹತ್ತಾರು ಬಸ್ ಗಳನ್ನು ವ್ಯವಸ್ಥೆ ಮಾಡಿ ನಗರದ ಶ್ರೀ ಪೂಜಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಸುಗಮ ಪ್ರಯಾಣ ಮಾಡಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಭಕ್ತಾದಿಗಳು ಅಮ್ಮನ ಕಿರು ದರ್ಶನವನ್ನು ಪಡೆದು ಧನ್ಯತೆ ಅನುಭವಿಸಲು ಶುಭಾಶಯಗಳನ್ನು ತಿಳಿಸಿದರು. 

ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮಿಳುನಾಡಿನ ಮೇಲ್ ಮರುವತ್ತೂರಿಗೆ ಪ್ರಯಾಣ ಮಾಡಿ ತಾಯಿ ಓಂ ಶಕ್ತಿಯ ದರ್ಶನವನ್ನು ಪಡೆಯಲು ಸಜ್ಜಾಗಿರುವ ಮಾಲದಾರಿಗಳು ನೀವು ಕಂಡಿರುವ ಕನಸುಗಳು ನನಸಾಗಲಿ ನಿಮ್ಮ ಇಷ್ಟಾರ್ಥಗಳು ಇಡೇರಲಿ ಮುಂಬರುವ ದಿನಗಳಲ್ಲಿ ಸಹ ಓಂ ಶಕ್ತಿ ಅಮ್ಮನ ದರ್ಶನ ಪಡೆಯಲು ನಿಮಗೆ ನನ್ನ ಸಹಾಯ ಇರುತ್ತಾದೆ ಎಲ್ಲಾರಿಗೂ ಒಳ್ಳೇಯದಾಗಲಿ ಕ್ಷೇಮವಾಗಿ ಹೋಗಿ ಬರಲು ಶುಭಾಶಯಗಳು ಕೋರಿದರು.

ನೂರಾರು ಭಕ್ತಾದಿಗಳಿಗೆ ಇದು ವಿಶೇಷ ಅನುಭವವನ್ನು ತರುತ್ತಿದ್ದು, ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಾವು ಸಹಕಾರ ನೀಡಿದ ಎಲ್ಲರಿಗೂ ರಾಜೀವ್ ಗೌಡ ಅವರು ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಸೇವೆಯಲ್ಲಿ ತಮ್ಮ ಸಕ್ರಿಯ ಹಸ್ತವನ್ನು ನೀಡಿ, ಭಕ್ತಾದಿಗಳಿಗೆ ಸಹಕಾರ ನೀಡಿದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ