ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು
ಶಿಡ್ಲಘಟ್ಟ :ಎನ್ ಎಸ್ ಎಸ್ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ಗ್ರಾಮಗಳು ಉದ್ದಾರ ಆದರೆ ದೇಶ ಉದ್ದಾರ ಎಂದು ಅಭಿಪ್ರಾಯ ಪಟ್ಟವರು. ಮೊದಲು ಗ್ರಾಮಗಳು ಸಾಮಾಜಿಕ ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಸಮಸ್ಯೆಗಳಿಂದ ಹೊರಬರಬೇಕು ಜನರಲ್ಲಿ ಅರಿವು ಮೂಡಿಸುವ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಎನ್.ಎಸ್.ಎಸ್.1969ರಿಂದ ಸೆಪ್ಟೆಂಬರ್ ತಿಂಗಳಲ್ಲಿ 24ನ್ನು ಎನ್.ಎಸ್.ಎಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಯುವಕರು ದೇಶ ಕಟ್ಟುವ ಕೆಲಸವನ್ನು ಮಾಡಬೇಕು ಸಮಸ್ಯೆಗಳನ್ನು ಎದುರಿಸುವ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಹೆಚ್. ಸಿ. ಮುನಿರಾಜು ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಎನ್.ಎಸ್.ಎಸ್ ದಿನ ಆಚರಣೆ ಮಾಡಲಾಯಿತು.
(ಬಾಕ್ಸ್)
ಎನ್.ಎಸ್.ಎಸ್ ವಿದ್ಯಾರ್ಥಿಗಳು ಸ್ವಯಂ ಶಿಸ್ತನ್ನು ಬೆಳೆಸಿಕೊಂಡು ತಮ್ಮ ಸುತ್ತಮುತ್ತಲಿನ ಜನರಲ್ಲಿ ಸೃಚ್ಚತೆಯ ಅರಿವನ್ನು ಮೂಡಿಸಬೇಕು ಎಂದು ಪ್ರಾಂಶುಪಾಲರಾದ ಸಿ.ವೆಂಕಟಶಿವಾರೆಡ್ಡಿ, ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಲಕ್ಷ್ಮಯ್ಯ, ಹೆಚ್. ವಿ ಶಿವಾರೆಡ್ಡಿ, ಶ್ರೀಕೃಷ್ಣ ಪರಮಾತ್ಮ,ಚಂದ್ರಶೇಖರ್ ,ಅರ್ಚನ ,ರಮೇಶ್, ಶ್ರೀಧರ್, ಶಮಾ,ಪ್ರಭಾ, ಸಾವಿತ್ರಮ್ಮ ಹಾಗೂ ನಾಗವೇಣಿ ಭಾಗವಹಿಸಿದ್ದರು.
Comments
Post a Comment