ಎರಡನೇ ವರ್ಷದ ಶ್ರೀ ರಾಮ ಶೋಭಾಯಾತ್ರೆ ಜೂನ್ 9 ರಂದು ಆಚರಣೆ

 ಶಿಡ್ಲಘಟ್ಟ:ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೂಲಕ ದೇಶದಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಐಶ್ವರ್ಯವನ್ನು ದೇಶ ವಾಸಿಗಳಿಗೆ ದಯಪಾಲಿಸುತ್ತಿರುವ ರಾಮಚಂದ್ರ ಪ್ರಭುವಿನ ಎರಡನೇ ವರ್ಷದ ಶ್ರೀ ರಾಮ ಶೋಭಾಯಾತ್ರೆಯನ್ನು ಶಿಡ್ಲಘಟ್ಟ ನಗರದಲ್ಲಿ ಆಚರಿಸುವ ಸಲುವಾಗಿ ಮೇ 4 ಶನಿವಾರ ಪೂರ್ವಭಾವಿ ಸಭೆಯನ್ನು ಹಂಡಿಗನಾಳ ಕೆವಿ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಭಜರಂಗದಳ ವಿಶ್ವಹಿಂದೂ ಪರಿಷತ್ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಹಿಂದೂ ಧರ್ಮದ ಮುಖಂಡರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. 
ಲೋಕಸಭಾ ಚುನಾವಣೆ ಇರುವುದರಿಂದ ದೇಶದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣೆಯ ಫಲಿತಾಂಶ ಜೂನ್ 4 ರ ನಂತರ ಯಾವುದೇ ಅಡಚಣೆ ಇಲ್ಲದೆ ಜೂನ್ 9 ರಂದು ಬಹಳ ಅದ್ದೂರಿಯಾಗಿ ಶ್ರೀ ರಾಮ ಶೋಭಾಯಾತ್ರೆ ಆಚರಣೆ ಮಾಡಲು ಎಲ್ಲಾರೂ ಒಕ್ಕೊರಲಿನಿಂದ ಒಮ್ಮತ ನೀಡಿ ದಿನಾಂಕವನ್ನು ನಿಗದಿಪಡಿಸಲಾಗಿದೆ.

 ಕಾರ್ಯಕ್ರಮದ ರೂಪುರೇಷೆಗಳನ್ನು ಮಾತನಾಡಲು ಇದೇ ಮೇ 6  ಸೋಮವಾರ ರಂದು ಮತ್ತೊಮ್ಮೆ ಬೈಟೇಕ್ ಅನ್ನು  ಕರೆಯಲಾಗಿದೆ ಎಲ್ಲಾ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರಾಮ ಶೋಭಾಯಾತ್ರೆಯು ವೈಭವದಿಂದ ನಡೆಯಲು ಸಲಹೆ ಸೂಚನೆಗಳನ್ನು ನೀಡಬೇಕೆಂದು ಹಿಂದೂ ಧರ್ಮದ ಮುಖಂಡರು ತಿಳಿಸಿದ್ದಾರೆ.
ವಿಶೇಷ ಸೂಚನೆ :
ಶ್ರೀ ರಾಮ ಶೋಭಾಯಾತ್ರೆಯನ್ನು ಯಾವುದೇ ರಾಜಕೀಯ ಪಕ್ಷಗಳ ಆಧಾರದ ಮೇಲೆ ನಡೆಸುತ್ತಿಲ್ಲ. ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ರೈತಾಪಿ ವರ್ಗಕ್ಕೆ ಈ ವರ್ಷವೂ ಸಹ ಉತ್ತಮ ಮಳೆ ಬೆಳೆಯಾಗಿ ನೆಮ್ಮದಿಯ ಬದಕು ಸಿಗಲಿ,ದೇಶ ಸುಭದ್ರವಾಗಿರಲು ಪಕ್ಷಾತೀತವಾಗಿ ಪಾಲ್ಗೊಂಡು ಶ್ರೀ ರಾಮ ಶೋಭಾಯಾತ್ರೆಯನ್ನು ಯಶಸ್ವಿ ಮಾಡುವ ಜವಾಬ್ದಾರಿ ಪ್ರತಿ ಹಿಂದೂ ಕುಟುಂಬದ ಸದಸ್ಯರಿಗೆ ಇದೆ ದಯವಿಟ್ಟು ಎಲ್ಲರೂ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿ ಬೈಟೇಕ್ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಮತ್ತು ಎಲ್ಲ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಹಿಂದೂ ಧರ್ಮದ ರಕ್ಷಕರು ಪಾಲ್ಗೊಂಡಿದ್ದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ