ಅಂಬೇಡ್ಕರ್ ಪರಿನಿಬ್ಬಾಣ ದಿನ ಪ್ರಯುಕ್ತ ಬೃಹತ್ ಐಕ್ಯತಾ ಸಮಾವೇಶ
ನಗರದ ಪ್ರವೇಶ ಮಂದಿರದಲ್ಲಿ ಪತ್ರಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆ ಮುಖಂಡರು ಮಾತನಾಡಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು
ಮೀಸಲಾತಿಗಳನ್ನು ನಾಶಮಾಡುತ್ತಿರುವ ಆರ್ ಎಸ್ ಎಸ್ ಮತ್ತು ಬಿಜೆಪಿ ದುರಾಡಳಿತ ಸರ್ಕಾರವಾಗಿದ್ದು ಈ ಸರ್ಕಾರಗಳಿಗೆ ಆದಿವಾಸಿಗಳು, ಅಲೆಮಾರಿ,ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಂದ ಮುಂಬರುವ ಚುನಾವಣೆಯಲ್ಲಿ ಬುದ್ದಿ ಕಲಿಸುವುದಾಗಿ ತಿಳಿಸಿದರು.
ಡಾಕ್ಟರ್ ಬಿ,ಆರ್ ಅಂಬೇಡ್ಕರ್ ರಚನೆಯ ಸಂವಿಧಾನಕ್ಕೆ ಯಾವುದೇ ರೀತಿಯ ಅಪಪ್ರಚಾರವಾದರೆ ಉಗ್ರವಾದ ಹೋರಾಟಗಳನ್ನು ಇಂತ ಸಮಾವೇಶಗಳ ಮೂಲಕ ಮಾಡುತ್ತೇವೆ ಆದ್ದರಿಂದ ಡಿಸೆಂಬರ್ 6ರಂದು ನಡೆಯುವ ಸಮಾವೇಶಕ್ಕೆ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಲ್ಲಿದ್ದು ತಾಲೂಕಿನಿಂದ ಒಂದು ಸಾವಿರಕ್ಕೆ ಹೆಚ್ಚು ಜನರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು,
ಈ ಸಂದರ್ಭದಲ್ಲಿ ಮೇಲೂರು ಮಂಜುನಾಥ, ತಾತಹಳ್ಳಿ ಚಲಪತಿ, ದಡಂಘಟ್ಟ ತಿರುಮಲೇಶ್, ಹುಜಗೂರು ವೆಂಕಟೇಶ್, ಹೊಸಪೇಟೆ
ಮುನಿ ಅಂಜಿನಪ್ಪ, ಲಕ್ಕೇನಹಳ್ಳಿ ವೆಂಕಟೇಶ್, ಯಣ್ಣಂಗೂರು ಸುಭ್ರಮಣಿ, ಹಿತ್ತಲಹಳ್ಳಿ ದೇವರಾಜ್, ಹೇಮಾರ್ಲಹಳ್ಳಿ ಮುನಿಯಪ್ಪ, ನಗರದ ಚಂದ್ರು, ಇತರರು ಹಾಜರಿದ್ದರು.
Comments
Post a Comment