ಶ್ರೀ ಮಳ್ಳೂರಮ್ಮ ದೇವಿ ಜಾತ್ರಾ ಮಹೋತ್ಸವ
ಶಿಡ್ಲಘಟ್ಟ, ಡಿ.7: ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಈ ಬಾರಿ ವಿಶೇಷವಾಗಿ ಶ್ರೀ ಮಳ್ಳೂರಮ್ಮ ದೇವಿ ಜಾತ್ರಾ ಮಹೋತ್ಸವ ಸಮಾರಂಭ ವನ್ನು ಹಮ್ಮಿಕೊಂಡಿದ್ದಾರೆ.
ತಾಲ್ಲೂಕು ಆಡಳಿತ ಹಾಗೂ ದೇವರ ಮಳ್ಳೂರು ಗ್ರಾಮ ದವರಿಂದ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ಸಮಾರಂಭಕ್ಕೆ ಡಾ. ಬ್ರಹ್ಮಶ್ರೀ ಆನಂದ ಗುರೂಜಿ ಆಗಮಿ ಸುತ್ತಿದ್ದಾರೆ, ಪುರಾಣ ಪ್ರಸಿದ್ಧವಾದ ಶ್ರೀ ಮಳ್ಳೂರಾಂಭ ದೇವಿಯ ಜಾತ್ರೆಗೆ ಪ್ರತಿ ವರ್ಷ ಹೋರ ರಾಜ್ಯಗಳಿಂದ ಮತ್ತು ಸುತ್ತ ಮುತ್ತಲ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಲಿದ್ದಾರೆ ಸಮಾಜ ಸೇವಕರು ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಗ್ರಾಮದೇವತೆಯಾಗಿ ನೆಲೆಸಿರುವ ಈ ದೇವಿಯ ದರ್ಶನ ಪಡೆದವರಿಗೆ ಜೀವನದಲ್ಲಿ ಬೇಡುವ ವರಗಳನ್ನು ಪ್ರಾಪ್ತಿಸುತ್ತಾಳೆ ಎಂಬ ನಂಬಿಕೆ ಜನರದ್ದು ವಿಶೇಷವಾಗಿ ಗ್ರಾಮೀಣ ಕ್ರೀಡೆಯಾದ ಕಬ್ಬಡಿ ಪಂದ್ಯಾವಳಿಗಳೂ, ವ್ಯಾದ್ಯಗೋಷ್ಠಿ ಇನ್ನು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯುತ್ತಾದೆ ಸುತ್ತ ಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ಎಲ್ಲರೂ ಜಾತ್ರಾ ಮಹೋ ತ್ಸವ ಸಮಾರಂಭದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಾಲ್ಲೂಕು ಆಡಳಿತ ಹಾಗೂ ದೇವರ ಮಳ್ಳೂರು ಗ್ರಾಮಸ್ಥರು ಸ್ವಾಗತ ಕೋರಿದರು.
Comments
Post a Comment