ಜನರ ಸೇವೆಯೇ ಜನಾರ್ದನ ಸೇವೆ-ರಾಜೀವ್ ಗೌಡ
ಶಿಡ್ಲಘಟ್ಟ, ತಾಲ್ಲೂಕಿನ ಎಲ್ಲಾ ಧರ್ಮದ ದೇವಾಲಯಗಳ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಎಬಿಡಿ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಹಾಗೂ ಸಮಾಜ ಸೇವಕ ರಾಜೀವ್ ಗೌಡ ತಿಳಿಸಿದರು,
ಬಶೆಟ್ಟಹಳ್ಳಿ ಗ್ರಾಮಪಂಚಾಯಿತಿಯ ನಲ್ಲರಾಳ್ಳಹಳ್ಳಿ ಗ್ರಾಮದಲ್ಲಿ ನೆಲೆಸಿರುವಂತಹ ಪುರಾಣ ಪ್ರಸಿದ್ದಿ ದೇವಾಲಯವಾದ ರಾಮಲಿಂಗೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವಕ್ಕೆ ತಹಶೀಲ್ದಾರ್ ರಾಜೀವ್ ಚಾಲನೆ ನೀಡಿದರು.
ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಎಬಿಡಿ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ರಾಜೀವ್ ಗೌಡ ಶಿಡ್ಲಘಟ್ಟ ಕ್ಷೇತ್ರದಲ್ಲಿ ಎಲ್ಲಾ ಧರ್ಮದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ ಮತ್ತು ಧ್ವನಿವರ್ಧಕ ದೇವಾಲಯ ನಿರ್ಮಾಣಕ್ಕೆ ಸಹಾಯ ನೀಡಿ ಸರ್ವಜನಾಂಗಕ್ಕೆ ತಮ್ಮ ಸೇವೆ ಮುಂದುವರಿಸಿದ್ದಾರೆ ಈ ನಿಟ್ಟಿನಲ್ಲಿ ಬಶೆಟ್ಟಹಳ್ಳಿ ಗ್ರಾ.ಪಂ ನಲ್ಲರಾಲ್ಲಹಳ್ಳಿಯ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳಿಗೆ ಶುದ್ಧ ನೀರಿನ ಬಾಟಲಿ,ತಂಪಾದ ಮಜ್ಜಿಗೆ, ಪ್ರಸಾದವನ್ನು ವಿತರಿಸಿದರು.
ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ ರಾಮಲಿಂಗೇಶ್ವರ ಬೆಟ್ಟದಲ್ಲಿ ನೆಲೆಸಿರುವಂತಹ ರಾಮಲಿಂಗೇಶ್ವರ ಸ್ವಾಮಿಯ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಇರಲಿ ಆ ಭಗವಂತ ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಎಲ್ಲಾ ಮಹಿಳೆಯರಿಗೆ ಅರಿಶಿನ, ಕುಂಕುಮ, ಸೀರೆ ವಿತರಿಸಿ ಭಕ್ತಾದಿಗಳ ಸೇವೆಯಲ್ಲಿ ಅಳಿಲು ಸೇವೆ ಸಲ್ಲಿಸಿ ಶುಭ ಹಾರೈಸಿದ ಸಹನಾ ರಾಜೀವ್ ಗೌಡ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಗ್ರಾಮ ಪಂಚಾಯತಿ ಸುನೀತ ಸಾದಲಿ ಗೋವಿಂದರಾಜು, ಗುಡಿಹಳ್ಳಿ ನಾರಾಯಣಸ್ವಾಮಿ ಅಪ್ಪೆಗೌಡನಹಳ್ಳಿ ಮಂಜುನಾಥ್ ಬಾಬು, ಸಾದಲಿ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರು, ಬೈರಾರೆಡ್ಡಿ, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮರೆಡ್ಡಿ, ಹಾಗೂ ಸಮಿತಿಯ ಎಲ್ಲಾ ಸದಸ್ಯರು, ಗಂಗಾಧರ ಕಂಬಾಲಹಳ್ಳಿಕೆ ಸಿ ರಾಜೇಶ್, ಕೆ ಮಲ್ಲಣ್ಣಧನಮಿಟ್ಟೆನಹಳ್ಳಿ, ವೆಂಕಟರೆಡ್ಡಿ, ಮಂಜುನಾಥ್, ಕೇಶವ ರೆಡ್ಡಿ ಕಾಂಗ್ರೆಸ್ ಮುಖಂಡರು ಮನೋಹರ್, ರಾಘವೇಂದ್ರ, ಸುರೇಶ, ಹರೀಶ್, ದೇವೇಂದ್ರ, ಮತ್ತು ಊರಿನ ಮುಖ್ಯಸ್ಥರು ಹಾಗೂ ಎಬಿಡಿ ಸದಸ್ಯರು ಮುಂತಾದವರು ಹಾಜರಿದ್ದರು.
ವರದಿ -ಗೊರಮಡಗು ಮೈತ್ರಿ ಲೋಕೇಶ್
Comments
Post a Comment