ಓಂಶಕ್ತಿ ದೇವಾಲಯಕ್ಕೆ ಹೊರಡಲು ಉಚಿತ ಬಸ್ ವ್ಯವಸ್ಥೆ ಮಾಡಿದ ಜೆಡಿಎಸ್ ಮುಖಂಡ -ಬಿ.ಎನ್.ರವಿಕುಮಾರ್
ಶಿಡ್ಲಘಟ್ಟ::ಗೊರಮಡಗು ಗ್ರಾಮದ ಸುಮಾರು 100 ಕ್ಕೂ ಅಧಿಕ ಓಂ ಶಕ್ತಿ ಮಾಲದಾರಿಗಳಿಗೆ ಓಂ ಶಕ್ತಿ ದೇವಾಲಯಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಿದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್
ಗ್ರಾಮದ ಓಂಶಕ್ತಿ ಭಕ್ತಾದಿಗಳು ತಮಿಳುನಾಡಿನಲ್ಲಿ ನೆಲೆಸಿರುವ ಓಂಶಕ್ತಿ ತಾಯಿಯ ದರ್ಶನಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲು ಜೆಡಿಎಸ್ ಮುಖಂಡ ರವಿಕುಮಾರ್ ರವರಿಗೆ ಮನವಿ ಮಾಡಿದ ತಕ್ಷಣ ಭಕ್ತಾದಿಗಳ ಮಾತಿಗೆ ಸ್ಪಂದಿಸಿ ಅನುಕೂಲ ಮಾಡಲಾಯಿತು ಎಂದು ಗ್ರಾಮದ ಹಿರಿಯ ಮುಖಂಡ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಓಂಶಕ್ತಿ ಮಾಲಾದಾರಿಗಳು ಕ್ಷೇಮವಾಗಿ ಹೋಗಿ ಬರಬೇಕೆಂದು ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಿದರು.
ಓಂಶಕ್ತಿ ಮಾಲಾದಾರಿಗಳು ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಇದ್ದ ಕಾರಣ ಅವರ ಯೋಗ ಕ್ಷೇಮ ನೊಡಿ ಕೊಳ್ಳಲು ಗ್ರಾಮದ ಯುವ ಮುಖಂಡ ಡೀಶ್ ಮಂಜುನಾಥ್ ಅವರ ಜೊತೆಯಲ್ಲಿ ಮೇಲ್ ಮರವತ್ತೂರು ಓಂಶಕ್ತಿ ದೇವಾಲಯಕ್ಕೆ ಹೊರಡಿದರು.
ಇನ್ನು ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ನಾರಾಯಣಸ್ವಾಮಿ,ಡೀಶ್ ಮಂಜುನಾಥ್,ಶಿವಪ್ಪ, ವೆಂಕಟೇಶ್,ಮಧು, ಶ್ರೀನಿವಾಸ್,ಪಿಳ್ಳಕ್ಕ,ಭೂದೇವಮ್ಮ, ಮತ್ತು ಓಂಶಕ್ತಿ ಭಕ್ತಾದಿಗಳು ಹಾಜರಿದ್ದರು.
Comments
Post a Comment