ಶಿಡ್ಲಘಟ್ಟ ಆರೋಗ್ಯದ ಜೊತೆ ಯುವಜನತೆಗೆ ಉದ್ಯೋಗ ಅವಕಾಶ ಕಲ್ಪಿಸಿದ - ರಾಜೀವ್ ಗೌಡ


ಶಿಡ್ಲಘಟ್ಟ:: ಎಸ್ಎಸ್ಎಲ್ ಸಿ ಇಂದ ಡಿಗ್ರಿ ಡಬಲ್ ಡಿಗ್ರಿ ಪದವಿ ಪಡೆದ ಎಲ್ಲಾರಿಗೂ ಇದೊಂದು ಸುವರ್ಣ ಅವಕಾಶ  ಇಂದು ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಯುವಜನತೆಗೆ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ನೀಡಲಾಗಿದೆ ಸುಮಾರು ಒಂದು ಸಾವಿರಕ್ಕೂ ಅಧಿಕ ನಿರುದ್ಯೋಗ ಯುವಕ-ಯುವತಿಯರಿಗೆ ಸ್ಥಳದಲ್ಲೇ ಅಪಾಯಿಂಟ್ಮೆಂಟ್ ಲೇಟರ್ ಕೊಟ್ಟಿದ್ದೇವಿ ಅದರ ಜೊತೆ ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ  ಬೃಹತ್ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವವರಿಗೆ ನಮ್ಮ ಆಂಬುಲೆನ್ಸ್ ವಾಹನದಲ್ಲಿ ಕರೆದು ಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ
ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಕೇಂದ್ರ ಸಚಿವ ಕೆ
ಎಚ್.ಮುನಿಯಪ್ಪ ಪಾಲ್ಗೊಂಡು ರಾಜೀವ್ ಗೌಡರು ಮಾಡುತ್ತಿರುವ ಜನಪರ ಕಾರ್ಯಕ್ರಮಗಳಿಗೆ ಪ್ರಶಂಸಿದರು.
ಸಮಾಜ ಸೇವಕ ಕೆಪಿಸಿಸಿ ಕೋ-ಆರ್ಡಿನೇಟರ್ ಕಾಂಗ್ರೆಸ್ ಮುಖಂಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ರಾಜೀವ್ ಗೌಡರ ಹುಟ್ಟು ಹಬ್ಬದ ಪ್ರಯುಕ್ತ ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಬೃಹತ್ ಉಚಿತ ಆರೋಗ್ಯ ಮೇಳ ಹಾಗೂ ನಿರುದ್ಯೋಗ ನಿವಾರಣೆಗಾಗಿ ಸಾವಿರಕ್ಕೂ ಅಧಿಕ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಲು ಹನುಮಂತಪುರ ಗೇಟ್ ಬಳಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಹಾಗೂ ಆರೋಗ್ಯ ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು  ಸ್ಥಳದಲ್ಲೇ ಉದ್ಯೋಗದ ಅಪಾಯಿಂಟ್ಮೆಂಟ್ ಲೇಟರ್ ನೀಡಿ ಇಪ್ಪತ್ತೈದು ಸಾವಿರ ಸಂಬಳ ಸಿಗುವಂತಹ ಉದ್ಯೋಗಗಳು ಕಲ್ಪಿಸಿದ ರಾಜೀವ್ ಗೌಡ, ಇನ್ನು ಹಲವರಿಗೆ ಆರೋಗ್ಯದ ದೃಷ್ಟಿಯಿಂದ ಬಿಪಿ, ಶುಗರ್,ಕಣ್ಣಿನ ತಪಾಸಣೆ, ಹಾಗೂ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲೇ ಉಚಿತ ಕನ್ನಡಕಗಳನ್ನು ನೀಡಿದರು ಹೆಚ್ಚಿನ ಚಿಕಿತ್ಸೆಗಾಗಿ ಸ್ವಂತ ಆಂಬುಲೆನ್ಸ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದು  ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ರಾಜೀವ್ ಗೌಡ ಅವರ ಅಭಿಮಾನಿಗಳಿಂದ ಬೆಳ್ಳಿ ಗದೆ ಹಾಗೂ  ಕಿರೀಟ ತೊಡಿಸಿ ಬೃಹತ್ ಹೂವಿನ ಹಾರ ಹಾಕಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಭಿಮಾನಿಗಳು ಹುಟ್ಟು ಹಬ್ಬದ ಪ್ರಯುಕ್ತ ಉದ್ಯೋಗ ಮೇಳ ಹಾಗೂ ಆರೋಗ್ಯ ಮೇಳಕ್ಕೆ ಬಂದ ಜನರಿಗೆ ವಿಶೇಷವಾಗಿ ಬಿರಿಯಾನಿ ಮತ್ತು ಪಲಾವ್ ಉಣಬಡಿಸಿದ ರಾಜೀವ್ ಗೌಡ
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರು ಮತ್ತು ನಾಯಕರು ಹಾಗೂ ಎಬಿಡಿ ಸಂಸ್ಥೆಯ ಸದ್ಯಸರು ಕಾರ್ಯಕರ್ತರು ಮತ್ತು ಉಪಸ್ಥಿತರಿದ್ದರು. 

  

 
    

Comments