ಜೆಡಿಎಸ್ ಭದ್ರಕೋಟೆ ಕೆಡಿವಿದ ರಾಜೀವ್ ಗೌಡ ಖಾತೆಯಲ್ಲಿ ಎರಡನೇ ಗೆಲುವು

ಶಿಡ್ಲಘಟ್ಟ:ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿಯ ಹೇಮಾರ್ಲಹಳ್ಳಿ ಗ್ರಾಮದಲ್ಲಿ ತೆರವಾಗಿದ್ದ ಕ್ಷೇತ್ರಕ್ಕೆ  ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಮುಖಂಡ ಹಾಗೂ ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ಬೆಂಬಲಿಗ ಕೆ.ಗಂಗಪ್ಪ ಗೆಲುವು ಸಾಧಿಸಿದ್ದಾರೆ.
ಸತತ ಮೂರು ಚುನಾವಣೆಗಳ ನಂತರ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಮೊದಲ ಗೆಲುವು ಕಂಡಿದ್ದಾರೆ. ಗ್ರಾಮದಲ್ಲಿ ಈ ಬಾರಿ ಕಾಂಗ್ರೇಸ್ ಗೆಲುವು ಕಾಣಲು ಪ್ರಮುಖ ಕಾರಣ ರಾಜೀವ್ ಗೌಡ ಎಂದು ತಿಳಿದು ಬಂದಿದೆ.
 ಅವರ ಬೆಂಬಲಿಗ ಮೊದಲಬಾರಿಗೆ ಗೆದ್ದಿರಿವುದರಿಂದ ಬೆಂಬಲಿಗರು ಕುಣಿದು ಕುಪ್ಪಳಿಸಿ,ಕಾರ್ಯಕರ್ತರು ಪಟಾಕಿ ಹಚ್ಚಿ,ಸಿಹಿ ಹಂಚಿ ಸಂಭ್ರಮಿಸಿದರು. ಜಯಶೀಲರಾದ ಅಭ್ಯರ್ಥಿ ಕೆ.ಗಂಗಪ್ಪ ಅವರನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಕ್ಷೇತ್ರದಲ್ಲಿ ನಾನು ಮಾಡಿರುವ ಸಮಾಜಮುಖಿ ಕೆಲಸಗಳನ್ನು ರಾಜ್ಯದ ನಾಯಕರು ಹಾಗೂ ಕ್ಷೇತ್ರದ ಜನತೆ ಗುರ್ತಿಸುತ್ತಿದ್ದಾರೆ. ಈ ಬಾರಿ ಟಿಕೆಟ್ ನೀಡುವ ಆಶ್ವಾಸನೆಯನ್ನು ನೀಡಿದ್ದಾರೆ. ಕ್ಷೇತ್ರದಲ್ಲಿ ಎಲ್ಲರ ಮನಗೆದ್ದು ಯಾವುದೇ ಪಕ್ಷಪಾತವಿಲ್ಲದೆ ಸೇವೆ ಮಾಡುತ್ತಿದ್ದೇನೆ ಎಂದು ಕಾಂಗ್ರೇಸ್ ಮುಖಂಡ ಹಾಗೂ ಎ.ಬಿ.ಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ತಿಳಿಸಿದರು.

ಸಹನಾ ರಾಜೀವ್ ಗೌಡ ಮಾತನಾಡಿ ಗಂಗಪ್ಪ ಅವರು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ನಾವು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕೆಲಸಕಾರ್ಯಗಳನ್ನು ಮಾಡುತ್ತೇವೆ. ಈ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿ. ರಾಜೀವ್ ಗೌಡ ಅವರು ಅನೇಕ  ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಜನರು ಅವರಿಗೆ ಇದೇ ರೀತಿ ಬೆಂಬಲಿಸಿದರೆ  ಮತ್ತಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾರಾಯಣಗೌಡ,ಚಂದ್ರಪ್ಪ,ಮಹೇಶ್, ವೀರಪ್ಪ,ಯಣ್ಣೂರು ಮಂಜುನಾಥ್, ಶಶಿ,ಮಂಜುನಾಥ್, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಕಾಂಗ್ರೇಸ್ ಮುಖಂಡರು ಹಾಗೂ ಎಬಿಡಿ ಕಾರ್ಯಕರ್ತರು ಹಾಜರಿದ್ದರು.

Comments