ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ ಬಜರಂಗದಳ ವತಿಯಿಂದ ವಾದ್ಯಗೋಷ್ಠಿ ಕಾರ್ಯಕ್ರಮ



ಶಿಡ್ಲಘಟ್ಟ:: ತಾಯಿ ರೇಣುಕಾ ಎಲ್ಲಮ್ಮ ದೇವಿ ನಾಡಿನ ಸಮಸ್ತರಿಗೂ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲಾರಿಗೂ ಕೊಡಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತಾದಿಗಳಿಗೊಸ್ಕರ  ಅನ್ನದಾನ ಮಾಡಿ ವಾದ್ಯಗೋಷ್ಠಿ ಹಮ್ಮಿಕೊಳ್ಳುವ  ಮೂಲಕ  ಹಿಂದೂ ಧರ್ಮವನ್ನು  ಜಾಗೃತಿ ಮೂಡಿಸುತ್ತಿರುವ ಭಜರಂಗದಳ ತಾಲ್ಲೂಕು ಸಂಯೋಜಕ ವೆಂಕಟೇಶ್ ರವರಿಗೆ ದೇವರು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಶಕ್ತಿ ತುಂಬಲಿ ಎಂದು ಹಾರೈಸಿದ ಮಾಜಿ ಶಾಸಕ ಎಂ ರಾಜಣ್ಣ.
 ಪ್ರತಿ ವರ್ಷದಂತೆ ಈ ವರ್ಷವೂ ಸಹಾ ನಗರದ ಬಸ್ ನಿಲ್ದಾಣದ ಮುಂದೆ ಆಯೋಜಿಸಿಲಾಗಿದ ವಾದ್ಯಗೋಷ್ಠಿ ಕಾರ್ಯಕ್ರಮವನ್ನು ಭಜರಂಗದಳ ಹಾಗೂ ಬಿಜೆಪಿ ಮುಖಂಡ ಬಿ.ವೆಂಕಟೇಶ್ ನೇತೃತ್ವದಲ್ಲಿ  ಹಲವಾರು ಹಿಂದೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಿಕೊಂಡು ಬಂದಿರುತ್ತಾರೆ . ಅಯೋಧ್ಯೆಯಲ್ಲಿ ನಿರ್ಮಾಣ ಮಾಡುತ್ತಿರುವ ರಾಮ ಮಂದಿರಕ್ಕೆ ಶಿಡ್ಲಘಟ್ಟ ದಿಂದ ಸುಮಾರು 6 ಲಕ್ಷ 50 ಸಾವಿರ ಹಣವನ್ನು ಸಂಗ್ರಹಿಸಿ ಕಳುಹಿಸಿಕೊಟ್ಟಿದ್ದರು, ಶಿಡ್ಲಘಟ್ಟ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ರೀ ರಾಮ ಶೋಭ ಯಾತ್ರೆಯನ್ನ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಇನ್ನು  ಹಿಂದು ಸಮಾಜ ಗೋಸ್ಕರ ನಿರಂತರ ಶ್ರಮ ಪಡುವ ಬಿ.ವೆಂಕಟೇಶ್    ಶಿಡ್ಲಘಟ್ಟದಲ್ಲಿ ಮೋದಿ ಬ್ರಿಗೇಡ್ ತಂಡ ಕಟ್ಟಿಕೊಂಡು ಹಿಂದುಗಳನ್ನು ಒಟ್ಟಿಗೂಡಿಸಿಕೊಂಡು ಕಾರ್ಯಕ್ರಮಗಳ ಮಾಡುತ್ತಿದ್ದಾರೆ. 
ಇದರ ಭಾಗವಾಗಿ ನೆನ್ನೆ ನಡೆದ ಶ್ರೀ ಎಲ್ಲಮ್ಮ ದೇವಿಯ ಕರಗದ ಪ್ರಯುಕ್ತ  ಶ್ರೀ ಸಲ್ಲಪುರಮ್ಮ ದೇವಿಗೆ ಪೋಜೆ ಸಲ್ಲಿಸಿ ಸುಮಾರು 4-ರಿಂದ 5 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಿದರು  ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನವನ್ನು ಸಹ ಹಮ್ಮಿಕೊಂಡು ಪ್ರಶಂಸೆಗೆ ಪಾತ್ರರಾದರು.
ಬಿಜೆಪಿ ಮುಖಂಡ ಸ್ಕೂಲ್ ದೇವರಾಜ್ ಮಾತನಾಡಿ ದೇಶ, ಸಂಸ್ಕೃತಿ, ಉಳಿಯಬೇಕಾದರೆ ಯುವಕರು ಜಾಗೃತಿ ರಾಗಬೇಕು.ಇಂತಹ ಕಾರ್ಯಕ್ರಮಗಳು ಮಾಡಬೇಕಾದರೆ ರಾಜಕೀಯ ಚುನಾವಣೆ ಇದ್ದರೆ ಮಾತ್ರ ಮಾಡುತ್ತಾರೆ ಅದರೆ ವೆಂಕಟೇಶ್ ರವರು ಚುನಾವಣೆ ಬರಲಿ ಬಿಡಲಿ ಪ್ರತಿವರ್ಷ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ಸಂತಸ ತಂದಿದೆ ಎಂದು ಇಂತಹ ಯುವಕರು ಹೆಚ್ಚಾದಂತೆ ದೇಶ ಸುಭಿಕ್ಷ ವಾಗಿರುತ್ತೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಜರಂಗದಳ ಬಳಗದ ಯುವಕರು ,ಮೋದಿ ಬ್ರೀಗೆಡ್ ನಾ ಅಭಿಮಾನಿಗಳು ಹಾಗೂ ಬಿಜೆಪಿ ಪಕ್ಷದ ಅಭಿಮಾನಿಗಳು ಭಾಗವಹಿಸಿದ್ದರು.


Comments