ಏಪ್ರಿಲ್ 17ರಂದು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ;ಬಿಎನ್ ರವಿಕುಮಾರ್

ಶಿಡ್ಲಘಟ್ಟ: ಮೇ 10ನೇ ತಾರೀಖು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಇದೇ ತಿಂಗಳು ಏಪ್ರಿಲ್ 17 ರಂದು ಸೋಮವಾರ 1 ಘಂಟೆ 30 ನಿಮಿಷಕ್ಕೆ ಎಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಆಶಿರ್ವಾದ ಪಡೆದು ಎಲ್ಲಾರ ಸಮ್ಮುಖದಲ್ಲಿ ನಾಮ ಪತ್ರ ಸಲ್ಲಿಸುತ್ತಿದೇವಿ ಎಂದು ತಿಳಿಸಿದ ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್.
ಮೇಲೂರು ಗ್ರಾಮದ ತಮ್ಮ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ದೇಶಕ್ಕೆ ಸಂವಿಧಾನ ನೀಡಿದಂತಹ ಮಹಾನ್ ಮಾನವತಾವಾದಿ ಡಾಕ್ಟರ್ ಬಾಬ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯಂದು ಅವರ ಪಾದಕ್ಕೆ ನಮಸ್ಕರಿಸುತ್ತ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ದೇಶದ ಮಾಜಿ ಪ್ರಧಾನ ಮಂತ್ರಿಗಳು ಆದಂತಹ ದೇವೇಗೌಡರು ಮತ್ತು ಅವರ ಪತ್ನಿ ಚೆನ್ನಮ್ಮ ಅವರ ಆಶಿರ್ವಾದ ಪಡೆದು ಈ ರಾಜ್ಯದ ರೈತರ ಕಣ್ಮಣಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣ ನವರ ಆಶಿರ್ವಾದ ಪಡೆದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಲ್ಲಿ ಬಿಪಾರಂ ಕೊಟ್ಟಿರುತ್ತಾರೆ ಮೇ 10 ರಂದು ನಡೆಯಲಿರುವ ಚುನಾವಣೆಯ ಭಾಗವಾಗಿ ಇದರ ಒಂದು ನಾಮಪತ್ರ ಸಲ್ಲಿಸುವ ದಿನಾಂಕವನ್ನು ಇದೇ ತಿಂಗಳು 17-4-2023 ಸೋಮವಾರ ಮಧ್ಯಾಹ್ನ 1 ಘಂಟೆ 30 ನಿಮಿಷಕ್ಕೆ ಎಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಆಶಿರ್ವಾದ ಪಡೆದು ಅವರ ಸಮ್ಮುಖದಲ್ಲಿ ನಾಮ ಪತ್ರ ಸಲ್ಲಿಸುತ್ತಿದ್ದೇವಿ ಈ ಸಲ 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿದ್ದೆ ಆದರೆ ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಜವಾಬ್ದಾರಿ ನನ್ನ ಮೇಲೆ ಇದೆ.
 ಈ ಕ್ಷೇತ್ರದ 242 ಬೂತ್ ಮಟ್ಟದ ಜೆಡಿಎಸ್ ಕಾರ್ಯಕರ್ತರು ಎಷ್ಟೇ ಜನ ಸಮಾಜ ಸೇವಕರು ಬಂದರು ಒಬ್ಬರು ಸಹ ಅಲುಗಾಡದೆ ಪಕ್ಷ ನಿಷ್ಠೆಯಿಂದ ಇದ್ದಾರೆ ಇದು ನಿಜವಾದ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆ ಈ ಕ್ಷೇತ್ರದಲ್ಲಿ ದುಡ್ಡಿನಿಂದ ರಾಜಕಾರಣ ಮಾಡುತ್ತೇನೆ ಎಂದರೆ ಅಷ್ಟು ಸುಲಭ ಅಲ್ಲ ಈ ಕ್ಷೇತ್ರದಲ್ಲಿ ಸ್ವಾಭಿಮಾನ ಮತದಾರರು ಇದ್ದಾರೆ ಈಗಾಗಲೇ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಬೇಸತ್ತು ಸ್ವಯಂ ಪ್ರೇರಿತರಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ್, ಬಂಕ್ ಮುನಿಯಪ್ಪ, ಡಾ.ಧನಂಜಯ್ ರೆಡ್ಡಿ, ಚಿಲಕಲನೇರ್ಪು ಶ್ರೀರಾಮಪ್ಪ, ನಂಜಪ್ಪ, ಮೇಲೂರು ಮಂಜುನಾಥ್,ಹುಜುಗೂರು ರಾಮಣ್ಣ, ತಾಲ್ಲೂಕು ಅಧ್ಯಕ್ಷರು ಡಿ ಬಿ ವೆಂಕಟೇಶ್,ಎಸ್ ಎಂ ರಮೇಶ್, ತಾದೂರು ರಘು, ಸದಾಶಿವ,ನಂದನವನ ಶ್ರೀ ರಾಮ ರೆಡ್ಡಿ,ಗಂಜಿಗುಂಟೆ ನರಸಿಂಹಮೂರ್ತಿ ಅಶ್ವಥ್ ರೆಡ್ಡಿ,ಹೈದರ್ ಅಲಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

 

Comments