ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಎರಡು ಲಕ್ಷ ಹಣ ನೀಡಿದ ಆಂಜಿನಪ್ಪ ಪುಟ್ಟು
ಶಿಡ್ಲಘಟ್ಟ ಮಾರುತಿ ನಗರದ ಶ್ರೀ ವೀರಾಂಜನೇಯ ಸ್ವಾಮಿಯ ದೇವಾಲಯ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾಪನೆ ಮಾಡಲು ಸಮಾಜ ಸೇವಕ ಪುಟ್ಟು ಆಂಜಿನಪ್ಪ ರವರಿಂದ ಒಂದು ಲಕ್ಷ ಹಣ ಸಹಾಯಧನವನ್ನು ನೀಡಿದ್ದಾರೆ ದೇವಾಲಯ ನಿರ್ಮಾಣ ಮಾಡಲು ಪ್ರಾರಂಭದಲ್ಲಿ ಒಂದು ಲಕ್ಷ ನೀಡಲಾಗಿತ್ತು ಒಟ್ಟಾರೆ ಮಾರುತಿ ನಗರದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಎರಡು ಲಕ್ಷ ಹಣ ನೀಡಿ ದೇವರ ಕೃಪೆಗೆ ಪಾತ್ರರಾದರು.
ಸುಮಾರು ಹತ್ತು ವರ್ಷಗಳಿಂದ ತಾಲೂಕಿನ ಪ್ರತಿಮನೆಗೂ ಸಹ ಪುಟ್ಟು ಆಂಜಿನಪ್ಪ ಕೊಡುಗೆ ಇದೆ, ಅದು ವಿದ್ಯುತ್ ದೀಪದ ಬಲ್ಪ್ ಆಗಿರಬಹುದು ಅಥವಾ ಕ್ರೀಡಾ ಸಾಮಗ್ರಿಗಳು ಇನ್ನಿತರೆ ಶಾಶ್ವತ ಕೊಡುಗೆಗಳನ್ನು ನೀಡಿ ಮನೆ ಮಗನಾಗಿದ್ದಾರೆ ಇದರ ಭಾಗವಾಗಿ ಜನರು ಸಹ ಪುಟ್ಟು ಆಂಜಿನಪ್ಪ ಜೊತೆ ಇದ್ದಾರೆ ಅವರ ಸಮಾಜ ಸೇವೆಯನ್ನು ಗುರುತಿಸಿ 52 ಸಾವಿರ ಮತಗಳನ್ನು ನೀಡಿ ತಮ್ಮ ಅಭಿಮಾನವನ್ನು ತೋರಿಸಿರುತ್ತಾರೆ ಅದರ ಭಾಗವಾಗಿ ಎಲ್ಲಾರ ಸೇವೆ ಮಾಡಲು ಸಜ್ಜಾಗಿರುವ ಪುಟ್ಟು ಆಂಜಿನಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ಎರಡು ಲಕ್ಷ ಹಣ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ
ಮಾರುತಿ ನಗರದಲ್ಲಿ ಪುರಾತನ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿಯ ದೇವಾಸ್ಥಾನದ ಜೀರ್ಣೋದ್ಧಾರ ಕೆಲಸವನ್ನು ಕಳೆದ ಎರಡು ವರ್ಷಗಳಿಂದ ನನ್ನ ಎಲ್ಲಾ ಯುವ ಸ್ನೇಹಿತರು ಹಾಗೂ ದೇವಾಸ್ಥಾನದ ಜೀರ್ಣೋದ್ಧಾರ ಸಮಿತಿಯು ದೇವಸ್ಥಾನವನ್ನು ಪುನರ್ ಪ್ರತಿಷ್ಠಾಪನೆ ಮಾಡಿ ಭಕ್ತಾದಿಗಳಿಗೆ ಸಮರ್ಪಣೆ ಮಾಡುವಂತದ್ದು ಆ ನಿಟ್ಟಿನಲ್ಲಿ ನನ್ನದು ಒಂದು ಅಳಿಲು ಸೇವೆ ಮಾಡಿದ್ದೇನೆ ಇನ್ನು ದೇವಾಸ್ಥಾನದ ಹೆಚ್ಚು ಕೆಲಸ ಇರುವುದರಿಂದ ಬೇರೆ ಎಲ್ಲಾರು ಕೈ ಜೋಡಿಸುವಂತಾಗಲಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದ ಸಮಾಜ ಸೇವಕ ಪುಟ್ಟು ಆಂಜಿನಪ್ಪ
Comments
Post a Comment