ಪ್ರಕೃತಿಯಿಂದ ನಿರ್ಮಾಣವಾದ ಮುತ್ತಾಂಜನೇಯ ಸ್ವಾಮಿ 14ನೇ ವರ್ಷದ ಹನುಮ ಜಯಂತಿ ಆಚರಣೆ
ಶಿಡ್ಲಘಟ್ಟ- ತಾಲೂಕಿನ ದೊಡ್ಡದಾಸರ ಹಳ್ಳಿಯ ಮುತ್ತಾಂಜನೇಯ ಸ್ವಾಮಿ ದೇವಾಲಯಕ್ಕೆ 80 ವರ್ಷಗಳ ಇತಿಹಾಸವಿದ್ದು ಇಲ್ಲಿ ಆಲದ ಮರದ ಕೆಳಗೆ ಉದ್ಬವಾದ ಆಂಜನೇಯ ಸ್ವಾಮಿ ಭಕ್ತಾದಿಗಳ ಹರಕೆಗಳನ್ನು ಈಡೇರಿಸುತ್ತಾ ಬಂದಿದ್ದು ಹನುಮ ಜಯಂತಿ ಪ್ರಯುಕ್ತ ಇಲ್ಲಿನ ಯುವಕರು ಕಳೆದ 14 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದು ಕಳೆದ ಮೂರು ವರ್ಷಗಳ ಹಿಂದೆ ಆಲದ ಮರದಲ್ಲಿ ಆಂಜನೇಯ ರೂಪ ದಲ್ಲಿ ಉದ್ಭವವಾಗಿದ್ದು
ಹನುಮ ಜಯಂತಿ ಪ್ರಯುಕ್ತ ಈ ದಿನ ಬೆಳಗಿನಿಂದಲೇ ದೇವಾಲಯದಲ್ಲಿ ಪೂಜೆಗಳನ್ನು ನಡೆಸಿ ದೇವರಿಗೆ ವಿಶೇಷ ಪುಷ್ಪಲಂಕಾರ ಮಾಡಿದ್ದರು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಗೀತೆಗಳ ಗಾಯಾನ ,ಮಕ್ಕಳಿಂದ ನೃತ್ಯ ಪ್ರದರ್ಶನ,ಹಾಸ್ಯ ಕಾರ್ಯಕ್ರಮಗಳು ನಡೆದವು ಹಾಗೂ 3,000 ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಲಾಗಿತ್ತು ಒಟ್ಟಿನಲ್ಲಿ ಜಾತ್ರೆಯ ವಾತಾವರಣದಂತೆ ಕಾರ್ಯಕ್ರಮವು ತುಂಬಾ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ದೇವಾಲಯ ಭಕ್ತ ಮಂಡಳಿ ಮತ್ತು ಯುವಕರು ಉಪಸ್ಥಿತರಿದ್ದರು.
ವರದಿ:-ಮೈತ್ರಿ ಲೋಕೇಶ್ ಶಿಡ್ಲಘಟ್ಟ
Comments
Post a Comment