ಮಂದಗತಿಯಲ್ಲಿ ಸಾಗುತ್ತಿರುವ ಮಸ್ತೇನಹಳ್ಳಿ ಕೈಗಾರಿಕಾ ಅಭಿವೃದ್ಧಿ ಕಾಮಗಾರಿ.



ಕನ್ನಡ ಮೈತ್ರಿ ನ್ಯೂಸ್::ಶಿಡ್ಲಘಟ್ಟ : ತಾಲೂಕಿನ ಗೊರಮಡುಗು ಕ್ರಾಸ್ ಬಳಿ ರೈತರು ಪ್ರತಿಭಟನೆ ನಡೆಸಿದರು.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಶಿಡ್ಲಘಟ್ಟಕ್ಕೆ ಹೊಂದಿಕೊಂಡಿರುವ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಈಗಾಗಲೇ ಮೊದಲನೇ ಹಂತ ಹಾಗೂ ಎರಡನೇ ಹಂತ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಮೂರನೇ ಹಂತದಲ್ಲಿ ಶಿಡ್ಲಘಟ್ಟ ತಾಲೂಕಿನ ಗೊರಮಡುಗು, ಚಿಂತಡಪಿ, ಹಲಸೂರು ದಿನ್ನೆ, ಮತ್ತು ಚಿಂತಾಮಣಿ ತಾಲೂಕಿನ ಜಂಗಮಶೀಗೇಹಳ್ಳಿ, ಮಾರಪ್ಪನಹಳ್ಳಿ, ತಳಗವಾರ ಸೇರಿದಂತೆ ಸುಮಾರು 7 ಹಳ್ಳಿಗಳ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿ, ಕೆ.ಐ.ಡಿ.ಎ.ಬಿ ನೋಟಿಸ್ ಜಾರಿ ಮಾಡಿದೆ. 
ಮೂರನೇ ಹಂತದ ಜಮೀನು ಸ್ವಾಧೀನಕ್ಕೆ ಫಲವತ್ತಾದ ಭೂಮಿಯನ್ನು ನಾವು ಬಿಡುವುದಿಲ್ಲ ಎಂದು ಕೆಲ ರೈತರು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲ ರೈತರು ತ್ವರಿತವಾಗಿ ಭೂಮಿ ವಶಪಡಿಸಿಕೊಂಡು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. 
ಜಮೀನು ನೀಡಲು ಕೆಲವರ ವಿರೋಧ, ಕೆಲವರ ಒಪ್ಪಿಗೆ ಇಂದ  ರೈತರಲ್ಲಿದ್ದ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಇತ್ತ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಣದೆ ಮಂದಗತಿಯಲ್ಲಿ ಸಾಗುತ್ತಿದೆ.
ಕೈಗಾರಿಕಾ ಅಭಿವೃದ್ಧಿಗೆ ಮೊದಲನೇ ಹಂತ ಮತ್ತು ಎರಡನೇ ಹಂತದಲ್ಲಿ 960 ಎಕರೆ ಜಮೀನನ್ನು ಕೆ.ಐ.ಡಿ.ಎ.ಬಿ ಈಗಾಗಲೇ
ವಶ ಪಡಿಸಿಕೊಂಡಿದೆ. ಇನ್ನೂ ಮೂರನೇ ಹಂತವಾಗಿ 1484 ಎಕರೆ ಜಮೀನು ಒತ್ತುವರಿ ಮಾಡಲು ಕೆ.ಐ.ಡಿ.ಎ.ಬಿ ಮುಂದಾಗಿದ್ದು ಇದಕ್ಕೆ ಕೆಲ ರೈತರು ವಿರೋದ ಪಡಿಸಿದರೆ, ಇನ್ನೂ ಕೆಲ ರೈತರು  ಭೂ ಸ್ವಾಧೀನ ಪಡಿಸಿಕೊಳ್ಳಲು ಒಪ್ಪಿಗೆ ನೀಡಿ ತ್ವರಿತ ಗತಿಯಲ್ಲಿ ಕೈಗಾರಿಕೆ ಅಭಿವೃದ್ಧಿ ಪಡಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುವಂತೆ ಒತ್ತಾಯಿಸಿದ್ದಾರೆ.
ಸರ್ಕಾರ ಕೈಗಾರಿಕೆ ಅಭಿವೃದ್ಧಿಗೆ ವಶಪಡಿಸಿಕೊಳ್ಳಲು ಗುರ್ತಿಸಿರುವ ಜಮೀನುಗಳ ರೈತರಿಗೆ ಶೀಘ್ರವಾಗಿ ಹಣ ಪಾವತಿಸಿ ಇಲ್ಲ ಜಮೀನು ಬಿಟ್ಟು ಕೊಡಿ ಎಂದು ಒತ್ತಾಯಿಸಿ ಶಿಡ್ಲಘಟ್ಟ ತಾಲೂಕಿನ ಗೊರಮಡಗು ಕ್ರಾಸ್ ಬಳಿ ರೈತರು ಪ್ರತಿಭಟನೆ ನಡೆಸಿದರು.
ಈಗಾಗಲೇ ಮೂರನೇ ಹಂತದ ಮೊದಲ ನೋಟಿಸ್ ಜಾರಿ ಮಾಡಲಾಗಿದೆ, ಸುಮಾರು 3 ತಿಂಗಳಾದರೂ ನೋಟಿಸ್ ಗೆ ಯಾವುದೇ ರೀತಿ ಮಾಹಿತಿ ಇಲ್ಲ ಒತ್ತುವರಿ ಆದ  ಜಮೀನುಗಳ ಮೇಲೆ ರೈತರು ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ಒತ್ತುವರಿ ಆಗಿರುವ ಜಮೀನುಗಳಿಗೆ ಯಾವುದೇ ರೀತಿಯ ವಹಿವಾಟು ಮಾಡಲು ಅನುಮತಿ ಇರುವುದಿಲ್ಲ ಎಂದು ನೋಟಿಸ್ ಜಾರಿ ಮಾಡಲಾಗಿದೆ. ಆದ್ದರಿಂದ ಅತೀ ಶೀಘ್ರವಾಗಿ ಜಮೀನುಗಳಿಗೆ ಪರಿಹಾರದ ಹಣ ನೀಡಿ ಇಲ್ಲವಾದಲ್ಲಿ ಜಮೀನುಗಳನ್ನು ರೈತರಿಗೆ ಬಿಟ್ಟುಕೊಡಿ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದರು. 
ಕೈಗಾರಿಕಾ ಪ್ರದೇಶವಾದರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ, ನಮ್ಮ ತಾಲ್ಲೂಕು ಅಭಿವೃದ್ಧಿ ಆಗುತ್ತದೆ ಹಾಗೂ ಈ ಭಾಗದಲ್ಲಿ ಆಧುನಿಕ ಶಿಕ್ಷಣದ ವ್ಯವಸ್ಥೆ ಸಿಗುತ್ತದೆ. ಶಾಲೆ,ಕಾಲೇಜು,  ಆಸ್ಪತ್ರೆ, ಬ್ಯಾಂಕ್, ರಸ್ತೆಗಳು, ಹಳ್ಳಿಗಳು ಅಭಿವೃದ್ಧಿ ಸಹ ಆಗುತ್ತವೆ. ಚಿಂತಾಮಣಿ-ಶಿಡ್ಲಘಟ್ಟದ ನಿರುದ್ಯೋಗ ಯುವಕರಿಗೆ ಕೂಗಳತೆಯ ಹಂತರದಲ್ಲಿ ಉದ್ಯೋಗ ಸಿಗುತ್ತದೆ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಆಗುವುದಕ್ಕೆ ನಾವು ಸ್ವಾಗತ ಮಾಡುತ್ತೇವೆ. ಶೀಘ್ರದಲ್ಲೇ ಕಂಪನಿಗಳು ಬರಲು ನಾವು ಸರ್ಕಾರಕ್ಕೆ ಮನವಿ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ಚಿಂತಡಪಿ ರಮೇಶ್, ಗೊರಮಡಗು ನಾರಾಯಣಸ್ವಾಮಿ, ಅಲಸೂರು ಮುನಿರಾಜು, ಮೈತ್ರಿ ಲೋಕೇಶ್, ನಾಗೇಶ್, ನಾರಾಯಣಸ್ವಾಮಿ, ನರಸಿಂಹಪ್ಪ, ಗೋಪಾಲ್, ನಾಗರಾಜಪ್ಪ ಹಲಸೂರು, ಗೊರಮಡಗು, ಚಿಂತಪಿ, ಜಂಗಮಶೀಗೆಹಳ್ಳಿ ರೈತರು ಪಾಲ್ಗೊಂಡಿದ್ದರು.

ವರದಿ -ಗೊರಮಡಗು ಮೈತ್ರಿ ಲೋಕೇಶ್ ಕನ್ನಡ ಮೈತ್ರಿ ನ್ಯೂಸ್ ಶಿಡ್ಲಘಟ್ಟ 

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ