ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ತಾಲ್ಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಕಾರ್ಯಕ್ರಮ
ಶಿಡ್ಲಘಟ್ಟ::-ತಾಲೂಕಿನ ಅಪ್ಪೇಗೌಡನ ಹಳ್ಳಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದ ತಾಲ್ಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕಾರ್ಯಕ್ರಮವನ್ನು ಬೆಳಗ್ಗೆ 8:00 ಗೆ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಗರಸಭೆ ಪೌರಾಯುಕ್ತ ಆರ್. ಶ್ರೀಕಾಂತ್ ರಾಷ್ಟ್ರ ಧ್ವಜವನ್ನು ನೆರವೇರಿಸಿದರು, ನಾಡ ಧ್ವಜವನ್ನು ನಗರಸಭೆ ಅಧ್ಯಕ್ಷ ಸುಮಿತ್ರ ರಮೇಶ್ ನೆರೆವೇರಿಸಿದರು, ಪರಿಷತ್ತಿನ ಧ್ವಜವನ್ನು ಕ.ಸಾ.ಪ ಅಧ್ಯಕ್ಷ ಆರ್.ಅನಂತ ಕೃಷ್ಣ ನೆರವೇರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವಿ.ಮುನಿಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಸಮ್ಮೇಳನಾಧ್ಯಕ್ಷರಾದ ಸಂತೆ ನಾರಾಯಣಸ್ವಾಮಿ ರವರ ಸಮ್ಮೇಳಾನಾಧ್ಯಕ್ಷ ಭಾಷಣದ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿ.ಮುನಿಯಪ್ಪ ನಮ್ಮ ಕನ್ನಡ ನಾಡು ನುಡಿ - ನೆಲ ಜಲ ಭಾಷೆ ಸಂಸ್ಕೃತಿ ಬೆಳೆಸುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಳ್ಳೆಯದಾಗಲಿ ಇಲ್ಲಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕನ್ನಡ ಕಟ್ಟಲು ಈ ಕಾರ್ಯಕ್ರಮ ಪ್ರೇರಣೆ ಆಗಲಿ ಕನ್ನಡ ಭಾಷೆಯನ್ನು ಎಲ್ಲರೂ ಗೌರವಿಸಿ ಬೆಳೆಸೋಣ ಎಂದು ಹೇಳಿದರು.
ನಂತರದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಅನಂತ ಕೃಷ್ಣ ನೆರವೇರಿಸಿ ಕೊಟ್ಟರು. ಆಶಯ ನುಡಿ ಕಾರ್ಯಕ್ರಮವನ್ನು ಕ.ಸಾ.ಪ.ಜಿಲ್ಲಾಧ್ಯಕ್ಷರಾದ ಡಾ!! ಕೋಡಿ ರಂಗಪ್ಪ ನೆರವೇರಿಸಿಕೊಟ್ಟರು.
ಇನ್ನು ಹಲವು ಕಾರ್ಯಕ್ರಮಗಳನ್ನು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಸಂತೆ ನಾರಾಯಣಸ್ವಾಮಿ, ಜಿಲ್ಲಾದ್ಯಕ್ಷ ಡಾ.ಕೋಡಿ ರಂಗಪ್ಪ, ತಾಲ್ಲೂಕು ಅದ್ಯಕ್ಷ ಅನಂತಕೃಷ್ಣ, ತಹಶೀಲ್ದಾರ್ ರಾಜೀವ್, ನಿಕಟ ಪೂರ್ವ ಅದ್ಯಕ್ಷೆ ಯಶೋಧಮ್ಮ,ನಗರ ಪ್ರಾಧಿಕಾರ ಅದ್ಯಕ್ಷ ನಂದೀಶ್, ಕೊಚ್ಚಿ ಮೋಲ್, ಶ್ರೀನಿವಾಸ್, ಇಓ ಮುನಿರಾಜು, ಬಿ ಇಓ ರಘುನಾಥ್ ರೆಡ್ಡಿ, ಸಿಡಿಪಿಓ ನೌತಾಜ್, ತ್ಯಾಗರಾಜ್, ಸರ್ಕಾರಿ ನೌಕರರ ಸಂಘ ಅದ್ಯಕ್ಷ ಸುಬ್ಬಾರೆಡ್ಡಿ.ಕನ್ಡ ಕನ್ನಡ ಸಂಘಟನೆ ಮುಖಂಡರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ-ಗೊರಮಡಗು ಮೈತ್ರಿ ಲೋಕೇಶ್ ಕನ್ನಡ ಮೈತ್ರಿ ನ್ಯೂಸ್ ಶಿಡ್ಲಘಟ್ಟ
Comments
Post a Comment