ರೈತರಿಗೆ ಗಿಡ, ಮರಗಳಿಗೆ ಪರಿಹಾರವನ್ನು ನೀಡಬೇಕಾಗಿ ಕೈಗಾರಿಕಾ ಇಲಾಖೆಯ ವಿರುದ್ಧ ಪ್ರತಿಭಟನೆ
ಚಿಂತಾಮಣಿ ::ತಾಲ್ಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಒಳಪಡಿಸಿಕೊಂಡಿರುವ ಜಮೀನುಗಳಲ್ಲಿನ ಮರ,ಗಿಡ,ಮಲ್ಕಿಕೆಗಳ ಪರಿಹಾರವನ್ನು ನೀಡಬೇಕೆಂದು ನೂರಾರು ರೈತರು ಪ್ರತಿಭಟನೆಯಲ್ಲಿ ನಿರತರಾಗಿದ್ದರು.
ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತ ಮುತ್ತಲಿನ ರೈತರಿಂದ ಕೆಐಡಿಬಿ ಇಲಾಖೆಯವರು ಸುಮಾರು 2 ವರ್ಷಗಳ ಇಂದೇ ರೈತರಿಂದ ಎರಡನೇ ಹಂತದ ಜಮೀನುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಒಂದು ಎಕರೆ ಜಮೀನಿಗೆ 42 ಲಕ್ಷ ರೂಗಳಂತೆ ಪರಿಹಾರ ಘೋಷಿಸಿರುತ್ತಾರೆ ಅದರ ಜೊತೆ ಗಿಡ,ಮರ,ಮಲ್ಕಿಗಳಿಗೆ ನಿಗದಿತ ಮೊತ್ತವನ್ನು ನೀಡಲು ಒಪ್ಪಿರುತ್ತಾರೆ ಅದರೆ ಸುಮಾರು ಎರಡು ಮೂರು ವರ್ಷ ಕಳೆದರೂ ನಮ್ಮ ಜಮೀನಿನಲ್ಲಿ ಬೆಳೆದಿದ್ದ ಗಿಡ ಮರಗಳಿಗೆ ಪರಿಹಾರವನ್ನು ನೀಡಿರುವುದಿಲ್ಲ ಇಲಾಖೆಯಿಂದ ಜೆಎಂಸಿ ಮಾಡಲು ರಿಟೈರ್ಡ್ ಸರ್ವೆಯರ್ ಆಚಾರ್ಯ ಎಂಬ ವ್ಯಕ್ತಿಯನ್ನು ನಿಯೋಜಿಸಿದ್ದರು ಇವರು ಕೈವಾರದ ಡಾಬದಲ್ಲಿ ದುಡ್ಡು ಕೊಟ್ಟವರಿಗೆ ಜೆಎಂಸಿ ಮಾಡಿಸಿ ಬಿಲ್ ಮಾಡಿಸಿ ಕೊಟ್ಟಿದ್ದಾರೆ ಇನ್ನೂ ಬಡ ರೈತರ ಜಮೀನುಗಳಿಗೆ ಭೇಟಿ ಸಹಾ ನೀಡಿರುವುದಿಲ್ಲ.
ಇನ್ನು ಕೆಲವು ರೈತರು ನಮ್ಮ ಜಮೀನಿನಲ್ಲಿ ಇರುವ ಗಿಡಗಳ ಸರ್ವೇ (ಜೆಎಂಸಿ) ಮಾಡಿಸಲು ರೈತರಿಂದ ಹಣಕ್ಕೆ ಬೇಡಿಕೆ ಸಹ ಇಡುತ್ತಿದ್ದರು. ಅವೈಜ್ಞಾನಿಕ ಜೆಎಂಸಿ ಮಾಡಿ ರೈತರಿಗೆ ತೊಂದರೆ ಮಾಡಿರುತ್ತಾರೆ. ಸರ್ಕಾರ ಕೂಡಲೇ ಪ್ರಾಮಾಣಿಕ ಸರ್ವೇ ಮಾಡುವ ವ್ಯಕ್ತಿಯನ್ನು ಆಯೋಜನೆ ಮಾಡಿ ನಮ್ಮ ಜಮೀನುಗಳ ಪುನರ್ ಮರು ಜೆಎಂಸಿ ಮಾಡಿಸಿ ನಮ್ಮ ಜಮೀನುಗಳಲ್ಲಿ ಬೆಳೆದಿರುವ ಗಿಡ,ಮರಗಳಿಗೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಪರಿಹಾರವನ್ನು ಕೊಡುವ ತನಕ ಈ ಪ್ರತಿಭಟನೆ ನಿಲ್ಲುವುದಿಲ್ಲ ಈಗಾಗಲೇ ಸರ್ಕಾರದ ಗಮನಕ್ಕೆ ಡಿಸೆಂಬರ್ 22 ರಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಲಿಖಿತವಾಗಿ ನಮಗೆ ಆದ ಅನ್ಯಾಯವನ್ನು ಪತ್ರದ ಮೂಲಕ ತಿಳಿಸಿದರು ಸಹ ಯಾವ ಕ್ರಮ ಕೈಗೊಂಡಿಲ್ಲ ಆದ್ದರಿಂದ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಕೆಲಸಗಳನ್ನು ರೈತರು ಎಲ್ಲಾ ಸೇರಿ ಮುಚ್ಚಿಸಿದ್ದೇವೆ ಇನ್ನೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೆಲವು ರೈತರು ಮಾತನಾಡಿ ಇದೇ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ನಾವು ಗಿಡ ಮರಗಳನ್ನು ಬೆಳೆಸಿ ಪೋಷಣೆ ಮಾಡಿದ್ದೇವಿ ಹೊಸದಾಗಿ ಗಿಡ ನೆಟ್ಟಿರುವುದಿಲ್ಲ ಕೆಲವು ಕಿಡಿಗೇಡಿಗಳು ನಮ್ಮ ಅಭಿವೃದ್ಧಿ ಸಹಿಸದೆ ಕೃಷ್ಣಭೈರೇಗೌಡ ರವರಿಗೆ ಸುಳ್ಳು ಸುದ್ದಿ ಹಬ್ಬಿಸಿರುತ್ತಾರೆ ಸುಮಾರು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಗಿಡ, ಮರಗಳನ್ನು ಪೋಷಣೆ ಮಾಡಿದ್ದೇವಿ ದಯವಿಟ್ಟು ಶಾಸಕ ಕೃಷ್ಣ ಬೈರೇಗೌಡರು ಈ ಭಾಗದ ನೊಂದ ರೈತರ ಪರವಾಗಿ ಇರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರಪಲ್ಲಿ ನಾರಾಯಣಸ್ವಾಮಿ,ಮಾರಪ್ಪನಹಳ್ಳಿ ಮುನಿಯಪ್ಪ,ತಳಗವಾರ ಗಂಗಾಧರಮೂರ್ತಿ,ರಾಮು, ಕೃಷ್ಣಮೂರ್ತಿ,ಶಶಿ,
ಮಲ್ಕಪುರ ಮುನಿರಾಜು,ಬಾಬು, ಮುನಿರಾಜು,ಮುನಿವೆಂಕಟರೋಣ,
ಮಸ್ತೇನಹಳ್ಳಿ ಬಿಜೆಪಿ ನಾರಾಯಣಸ್ವಾಮಿ, ಮಸ್ತೇನಹಳ್ಳಿ ನಟರಾಜ್, ಶೇಖರ್,ಮಾರಪ್ಪನಹಳ್ಳಿ ದೇವರಾಜ್,ಸತ್ತೀಶ್,
ಹೋಸುರು ಅಮರ್ ನಾಥ್,ವೆಂಕಟರೋಣಪ್ಪ, ಮುನಿಯಪ್ಪ,ಬದ್ರಿ,ಇನ್ನು ಹಲವಾರು ಭಾಗಿಯಾಗಿದ್ದರು.
ವರದಿ -ಗೊರಮಡಗು ಮೈತ್ರಿ ಲೋಕೇಶ್ ಕನ್ನಡ ಮೈತ್ರಿ ನ್ಯೂಸ್
Comments
Post a Comment