ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ 34 ಸಾವಿರ ಧನ ಸಹಾಯ -ರಾಜೀವ್ ಗೌಡ


ಶಿಡ್ಲಘಟ್ಟ::ಎಬಿಡಿ ಟ್ರಸ್ಟ್ ಸಂಸ್ಥೆ ವತಿಯಿಂದ ನಿರಂತರ ಸಮಾಜ ಸೇವೆ ಮುಂದುವರಿಸುತ್ತಿರುವ ರಾಜೀವ್ ಗೌಡ ಮತ್ತು ಕುಟುಂಬ ತಾಲೂಕಿನಲ್ಲಿ ಈಗಾಗಲೇ ಓಂಶಕ್ತಿ ಭಕ್ತಾದಿಗಳನ್ನು ಬಸ್ ವ್ಯವಸ್ಥೆ ಮಾಡಿ ಧನ ಸಹಾಯವನ್ನು ನೀಡಿ ಮೇಲ್ ಮರವತ್ತೂರು ದೇವಸ್ಥಾನಕ್ಕೆ ಕಳುಹಿಸಿಕೊಡಲಾಗಿದೆ.

 ಇನ್ನು ಯಾರಾದರೂ ಓಂಶಕ್ತಿ ಭಕ್ತಾದಿಗಳು ಹೊರಡುವವರಿಗೆ ‌ಜನವರಿ 23 ರಂದು ಶಿಡ್ಲಘಟ್ಟ ಎಬಿಡಿ ಕಛೇರಿಯಿಂದ ನೂರಾರು ಬಸ್ಸುಗಳ ಜೊತೆ ಊಟ,ವಸತಿ ಎಲ್ಲವು ಉಚಿತ ಎಂದು ರಾಜೀವ್ ಗೌಡ ಭಕ್ತಾದಿಗಳಿಗೆ ತಿಳಿಸಿದ್ದಾರೆ. 

ಇದರ ಭಾಗವಾಗಿ ಶಿಡ್ಲಘಟ್ಟ ನಗರದ ವಾರ್ಡ್ ನಂಬರ್ 2 ಶ್ರೀ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳ ಹಿಡುಮುಡಿ ಕಾರ್ಯಕ್ರಮಕ್ಕೆ ರಾಜೀವ್ ಗೌಡರ ಅನುಪಸ್ಥಿತಿಯಲ್ಲಿ ಅವರ ತಂದೆಯಾದ ವರದಣ್ಣ ಆಗಮಿಸಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಶಬರಿಮಲೆ ಹೊರಡುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ 34 ಸಾವಿರ ಧನ ಸಹಾಯ ಮಾಡಿ ಕ್ಷೇಮವಾಗಿ ಹೊಗಿ ಬರಲು ಶುಭಕೋರಿದರು. 
ಒಂದು ವರ್ಷದ ಹಿಂದೆ ವಾರ್ಡ್ ನಂಬರ್ 2 ರಲ್ಲಿ ದಿನಸಿ ಕಿಟ್ಟು ಹಂಚುವಾಗ ಬೇಡಿಕೆಯಾದ ಶ್ರೀ ಮುನೇಶ್ವರ ದೇವಾಲಯದ ಬಳಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಮಾಲೆ ಹಾಕುತ್ತಾರೆ ದಯವಿಟ್ಟು ದೇವಾಲಯದ ಮುಂಭಾಗದಲ್ಲಿ ಶೀಟ್ ವ್ಯವಸ್ಥೆ ಮಾಡಲು ಕೇಳಿದ್ದು ಇದಕ್ಕೆ ಒಂದು ಲಕ್ಷ ಹಣ ನೀಡಿದ್ದ ರಾಜೀವ್ ಗೌಡ ಇಂದು ಅದೇ ದೇವಾಲಯದ ಆವರಣದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಮಾಲೆ ಹಾಕಿದ್ದೇವಿ ಸಮಾಜ ಸೇವಕ ರಾಜೀವ್ ಗೌಡರಿಗೆ ಧನ್ಯವಾದಗಳು ತಿಳಿಸಿದ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು.
ಇನ್ನು ಈ ಸಂದರ್ಭದಲ್ಲಿ 
ಗುರುಸ್ವಾಮಿ ವಿಕ್ರಮ್, ನಾಗರಾಜ್, ಮಂಜುನಾಥ್,ಕರವೇ ಅಪ್ಪು,ಸುನೀಲ್,ಅಫಲ್ ಹರೀಶ್,ರಂಜೀತ್,ಸುನೀಲ್,ಮಾನಸ್, ಇನ್ನೂ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಹಾಜರಿದ್ದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ