ಎಬಿಡಿ ಗ್ರೂಪ್ ಟ್ರಸ್ಟ್ ವತಿಯಿಂದ ನಾ-ನಾಯಕಿ ಕಾರ್ಯಕ್ರಮ ಪೂರ್ವಭಾವಿ ಸಭೆ ಹಾಗೂ ಮುಖಂಡರ ಸಭೆ


ಶಿಡ್ಲಘಟ್ಟ -ರಾಹುಲ್ ಗಾಂಧಿ ಆದೇಶದಂತೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದೇನಿ -ಕಾಂಗ್ರೇಸ್ ಮುಖಂಡ ರಾಜೀವ್ ಗೌಡ ಹೇಳಿಕೆ 

ನಗರದ ಎಬಿಡಿ ಟ್ರಸ್ಟ್ ಕಛೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ನಾ-ನಾಯಕಿ ಪೂರ್ವಭಾವಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿ ಕ್ಷೇತ್ರದಲ್ಲಿ ನಾನು ಮೊದಲು ಬಂದಾಗ ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವ ಜನರ ಕಷ್ಟ ನೋಡಿದ ನನಗೆ ಈ ಕ್ಷೇತ್ರದ ಜನರಿಗಾಗಿ ಏನಾದರೂ ಮಾಡಲೇಬೇಕು ಎಂಬ ಬಯಕೆಯಿಂದ ನಗರ ಮತ್ತು ತಾಲ್ಲೂಕಿನ ಹಳ್ಳಿಗಳಿಗೆ ದಿನಸಿ ಕಿಟ್ ನೀಡುವ ಮೂಲಕ ಒಂದೊತ್ತು ಕುಟುಂಬ ಊಟ ಮಾಡುತ್ತಾರೆ ಎಂದು ಖುಷಿ ನೀಡಿತು ನಂತರ ದಿನಗಳಲ್ಲಿ ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿ ನುರಿತ ತಜ್ಞರಿಂದ ಚಿಕಿತ್ಸೆ ಕೊಡಿಸಿದೇವು ನಂತರ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಅಥವಾ ಎರಡು ಆಂಬುಲೆನ್ಸ್ ಮಾತ್ರ ಇದ್ದು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದರು.
 
ಕ್ಷೇತ್ರದ ಜನರಿಗಾಗಿ ಸುಮಾರು 10 ಆಂಬುಲೆನ್ಸ್ ನೀಡಿ ಸರ್ವಜನಾಂಗಕ್ಕೆ ಅನುಕೂಲ ಮಾಡುತ್ತಿದೇವಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕೈಲಾದ ಸಹಾಯ ಮಾಡುತ್ತಿದ್ದೇನೆ ಕಾಂಗ್ರೆಸ್ ಪಕ್ಷ ಬಲಪಡಿಸಲು ಈ ಭಾಗದ ರೈತಾಪಿ ವರ್ಗಕ್ಕೆ ಜ್ವಲಂತ ಸಮಸ್ಯೆ ನೀರಿನ ಹೋರಾಟಕ್ಕೆ ಮೇಕೆದಾಟು ಕಾರ್ಯಕ್ರಮಕ್ಕೆ ಸಾವಿರಾರು ಜನರನ್ನು ಕರೆದುಕೊಂಡು ಹೋಗಿದ್ದೇನೆ ಹಾಗೂ ಸಿದ್ದಾರಾಮೋತ್ಸವ ಭಾರತ್ ಜೋಡೊ ಕಾರ್ಯಕ್ರಮದಲ್ಲಿ ಎಬಿಡಿ ಸಂಸ್ಥೆಯ ಅಧ್ಯಕ್ಷರಾದ ನನಗೆ ಕೆಪಿಸಿಸಿ ಕೋ-ಅರ್ಡಿನೇಟರ್ ಆಗಿ ಜಿಲ್ಲೆಯ ಜವಾಬ್ದಾರಿ ನೀಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಉತ್ತೇಜಿಸಿದರು ಇನ್ನು ಈ ಭಾಗದ ರೈತರಿಗೆ ಯುವಕರಿಗೆ ಉದ್ಯೋಗ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬರಬೇಕೆಂಬುದೇ ನನ್ನ ಗುರಿ ಈ ನಿಟ್ಟಿನಲ್ಲಿ ಜನರು ನಾನು ಮಾಡಿರುವ ಸೇವೆಯನ್ನು ಗುರುತಿಸಿ ನನಗೆ ಮತ ನೀಡುತ್ತಾರೆಂದು ನಂಬಿರುವೆ ನಾನು ಈ ಕ್ಷೇತ್ರದಲ್ಲಿ ಜೀವನಪರ್ಯಂತ ಇದ್ದು ಜನರ ಸೇವೆ ಮಾಡುತ್ತೇನೆಂದು ಈ ಸಂದರ್ಭದಲ್ಲಿ ತಿಳಿಸುತ್ತೇನೆ ಎಂದು ಹೇಳಿದರು ಇನ್ನು ಕೋವಿಡ್ ಸಂದರ್ಭದಲ್ಲಿ ಹಲವು ಹಳ್ಳಿಗಳಿಗೆ ದಿನಸಿ ಕಿಟ್ ನೀಡಿದ್ದೇನೆ ಇನ್ನೂ ಉಳಿದ ಹಳ್ಳಿಗಳಿಗೆ ನಾಳೆಯಿಂದ ಪ್ರತಿ ಮನೆಗೂ ದಿನಸಿ ಕಿಟ್ ನೀಡುವೆ. 

ಓಂ ಶಕ್ತಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಉಚಿತವಾಗಿ ಬಸ್ ಮಾಡುತ್ತಿದ್ದೇನೆ ಜನವರಿ 23ರಂದು ಓಂ ಶಕ್ತಿ ಭಕ್ತಾದಿಗಳಿಗೋಸ್ಕರ ಎಷ್ಟೇ ಬಸ್ ಹೊರಡಿದರು ಅವರನ್ನು ಕಳಿಸಿಕೊಡಲು ಮಾಡುತ್ತೇನೆ ಹಾಗೂ ಜನವರಿ 16ರಂದು ಶ್ರೀಮತಿ ಇಂದಿರಾಗಾಂಧಿ ಮೊಮ್ಮಗಳಾದ ಪ್ರಿಯಾಂಕ ಗಾಂಧಿ ರವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಮಹಿಳಾ ಸಬಲೀಕರಣಕ್ಕಾಗಿ ನಾ ನಾಯಕಿ ಎಂಬ ಕಾರ್ಯಕ್ರಮ ನಡೆಯುತ್ತಿದ್ದು ಸುಮಾರು 5000 ಜನ ಮಹಿಳಾ ಕಾರ್ಯಕರ್ತರನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕರೆದುಕೊಂಡು ಹೋಗಲು ಪಣತೊಟ್ಟಿದ್ದೇನೆ ಎಂದು ತಿಳಿಸಿದರು.  
ಇನ್ನು ಈ ಸಂದರ್ಭದಲ್ಲಿ ವರದಣ್ಣ, ಸಹನಾ ರಾಜೀವ್ ಗೌಡ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್,ರಹಮತುಲ್ಲಾ, ಅಬ್ಲೂಡು ನಾರಾಯಣಸ್ವಾಮಿ,ನಗರಸಭೆ ಸದಸ್ಯ ಬಾಲಕೃಷ್ಣ, .ಭೈರೇಗೌಡ,ಅನ್ಸರ್ ಖಾನ್ ರೀಲ‌ ಅಸೋಸಿಯೇಷನ್‌ ಅಧ್ಯಕ್ಷರು,ಮುನಿವೆಂಕಟಸ್ವಾಮಿ, ಚರ್ಚ್ ನ ಫಾದರ್ ಸತ್ಯನಾರಾಯಣಪ್ಪ, ಕುಟ್ಟಿ ಮುನಿರಾಜು,ಆನೂರು ರವಿ,ದೇವಿಂದ್ರ,ಬಾಬು, ಇನ್ನೂ ಎಬಿಡಿ ಸದ್ಯಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.



Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ