ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಬಟ್ಟೆ ಕಿಟ್ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾತೃಶ್ರೀ ಹೇಮಾವತಿ ಅಮ್ಮನವರ ಜ್ಞಾನವಿಕಾಸ ಕಾರ್ಯಕ್ರಮದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಈ ದಿನ ರಾಜ್ಯಾದ್ಯತ 10000 ಮಂದಿ ಮಾಶಾಸನ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡುತ್ತಿದ್ದು ಶಿಡ್ಲಘಟ್ಟ ತಾಲ್ಲೂಕಿನ 80 ಮಂದಿ ದುರ್ಬಲ ವರ್ಗದ ಸದಸ್ಯರಿಗೆ ವಾತ್ಸಲ್ಯ ಬಟ್ಟೆ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಟ್ಟು 146 ಮಂದಿ ಮಾಶಾಸನ ಪಡೆಯುವ ಫಲಾನುಭವಿಗಳಿದ್ದು, ಪ್ರತಿ ತಿಂಗಳು ಯೋಜನೆಯ ವತಿಯಿಂದ ಅವರ ಜೀವನ ನಿರ್ವಹಣೆ ಆರೋಗ್ಯ ಚಿಕಿತ್ಸೆಗಾಗಿ ಹಾಗೂ ಆಹಾರ ಪೂರೈಕೆಗಾಗಿ ಮಾಸಾಸನವನ್ನು ನೀಡುತ್ತಿದ್ದು ಇದರಿಂದ ಎಷ್ಟೋ ನಿರ್ಗತಿಕ ಕುಟುಂಬಗಳಿಗೆ ಜೀವನಾಧಾರವಾಗಿದೆ. ಪ್ರತಿ ವರ್ಷ ವಾತ್ಸಲ್ಯ ಬಟ್ಟೆ ಕಿಟ್ ವಿತರಣೆ ಮಾಡುತ್ತಿದ್ದು ಅಮ್ಮನವರ ಈ ವಾತ್ಸಲ್ಯ ಕಾರ್ಯಕ್ರಮದಿಂದ ಮಾಶಾಸನ ಪಡೆಯುವ ಫಲಾನುಭವಿಗಳು ತುಂಬಾ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.. ತಾಲ್ಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ವಲಯದ ಎಲ್ಲಾ ಮೇಲ್ವಿಚಾರಕರು ಆಂತರಿಕ ಲೆಕ್ಕಪರಿಶೋಧಕರು ಕೃಷಿ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಈ ದಿನ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು...
Comments
Post a Comment