ಎಸ್.ಆರ್.ಸಿಟಿಜನ್ ಶಾಲೆಯಲ್ಲಿ ವಿಜ್ಞಾನ ಹಾಗೂ ಕಲೆ ವಸ್ತು ಪ್ರದರ್ಶನ

ಶಿಡ್ಲಘಟ್ಟ ::-ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೋಳ್ಳುವುದು ಅಗತ್ಯ ಎಂದು ಸಿಟಿಜನ್ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್. ರಾಮಚಂದ್ರರೆಡ್ಡಿ ಹೇಳಿದರು. 
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿನ ಎಸ್.ಆರ್.ಸಿಟಿಜನ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಹಾಗೂ ಕಲೆ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆ ಕಲ್ಪಿಸುವುದು ಮುಖ್ಯ ಎಂದರು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ,ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೈಹಿಕ ಶಿಕ್ಷಣ, ಇನ್ನೂ ಮುಂತಾದ ಕೌಶಲ್ಯ ತರಬೇತಿ ನೀಡಿ ವಿದ್ಯಾರ್ಥಿಗಳಿಗೆ ಸ್ವಾವಲಂಬನೆ ಸಾಧಿಸಲು ಪ್ರೇರಕವಾಗುತ್ತಾದೆ ಇದರ ಭಾಗವಾಗಿ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನ ಮೇಳದಲ್ಲಿ ಸುಮಾರು 400 ಕ್ಕೂ ಹೆಚ್ಚು ಮಾದರಿಗಳನ್ನು ಎಲ್.ಕೆ.ಜಿ. ವಿದ್ಯಾರ್ಥಿಗಳಿಂದ ಏಸ್.ಎಸ್.ಎಲ್.ಸಿ ವಿದ್ಯಾರ್ಥಿಗಳವರೆಗೂ ವಿವಿಧ ಕ್ಷೇತ್ರಗಳಾದ ಬ್ಯಾಂಕ್, ಶಾಲೆ, ಕೃಷಿ, ಆಸ್ಪತ್ರೆ,ಮಾಡೇಲ್ ಸಿಟಿ, ಇನ್ನೂ ಬಗೆಬಗೆಯ ವಿನ್ಯಾಸಗಳನ್ನು ಮಾಡಿದ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಪೋಷಕರಿಗೆ ಸಾರ್ವಜನಿಕರಿಗೆ ಅದರ ಮಹತ್ವ ಏನು ಎಂಬುವುದು ತಿಳಿಸಿ ಅದಕ್ಕೆ ವಿವರಣೆಗಳನ್ನು ನೀಡಿದರು. 

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಕೆ.ಆರ್ ಅನಿಲ್ ಶೌರಿ , ಪ್ರಾಂಶುಪಾಲ ಶಿವಣ್ಣ , ಮುಖ್ಯ ಶಿಕ್ಷಕ ಸತೀಶ್ , ಶಾಲಾ ಸಿಬ್ಬಂದಿ ಮತ್ತು ಪೋಷಕರು ಹಾಜರಿದ್ದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ