ಗೋವಿಂದ ಗೌಡರನ್ನು ವಿರೋಧಿಗಳು ಬೆನ್ನಿಗೆ ಚೂರಿ ಹಾಕಲು ಕರೆದು ಕೊಂಡು ಬಂದಿದ್ದಾರೆ -ವಿಜಯ್ ಎನ್


ಚಿಕ್ಕಬಳ್ಳಾಪುರ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿಜಯ್ ಎನ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ರವರನ್ನ ದಿಕ್ಕು ತಪ್ಪಿಸಿ ಬ್ಯಾಲಹಳ್ಳಿ ಗೋವಿಂದ ಗೌಡರನ್ನ ಎರಡು ಮೂರು ಜನ ಸೇರಿ ಅಭ್ಯರ್ಥಿ ಎಂದು ಘೋಷಣೆ ಮಾಡಿಸಿದ್ದಾರೆ ಇದು ಗೋವಿಂದ ಗೌಡರಿಗೆ ಬೆನ್ನಿಗೆ ಚೂರಿ ಹಾಕಲು ವಿರೋಧಿಗಳು ಮಾಡಿರುವ ಹುನ್ನಾರವಾಗಿದೆ ಗೋವಿಂದ ಗೌಡರು ಎರಡು ಜಿಲ್ಲೆಗೆ ಮಹಿಳೆಯರ ಸಬಲೀಕರಣಕ್ಕಾಗಿ ಬೇಕಾಗಿರುವ ಸಂಪನ್ಮೂಲ ವ್ಯಕ್ತಿ ಅವರು ಒಂದು ತಾಲೂಕಿಗೆ ಸೀಮಿತ ಮಾಡುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಲಹಳ್ಳಿ ಗೋವಿಂದೇಗೌಡ ಈ ಕ್ಷೇತ್ರಕ್ಕೆ ಏನು ಮಾಡಿಲ್ಲ ಅವರಿಗಿಂತ ಕಾಂಗ್ರೆಸ್ ಪಕ್ಷದ ಚಿಹ್ನೆಯ ಮುಖಾಂತರ ಸುಮಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ರಾಜೀವ್ ಗೌಡ ಮತ್ತು ಆಂಜಿನಪ್ಪ ಪುಟ್ಟು ಇವರಿಗೆ ಅಭ್ಯರ್ಥಿ ಮಾಡಬೇಕೆಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆಗುತ್ತಿದೆ ಇದಕ್ಕೆ ನಿಮ್ಮ ಉತ್ತರ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯ್ ಸಮಾಜ ಸೇವೆ ಅಂತ ಬಂದರೆ ಕ್ಷೇತ್ರಕ್ಕೆ ಮೊದಲು ಬಂದು ಸಮಾಜ ಸೇವೆ ಮುಖಾಂತರ ಬಡವರಿಗೆ ಸಹಾಯದ ಹಸ್ತ ನೀಡಿರುವುದು ಕೊತ್ತನೂರು ಪಂಚಾಕ್ಷರಿ ರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಗುವ ಅರ್ಹತೆ ಇದೆ 

ಇನ್ನು ಕ್ಷೇತ್ರದಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿ ಆಗಬೇಕೆಂದರೆ ಮೊದಲು ಮುನಿಯಪ್ಪ ರವರ ಆಶಿರ್ವಾದ ಇರಬೇಕು ಅವರ ಜೊತೆಯಲ್ಲಿ ಇದ್ದು ಕೆಲಸ ಮಾಡಬೇಕೆಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಹೇಬರು ತಿಳಿಸಿದ್ದಾರೆ ಅವರ ಜೊತೆ ಇದ್ದರೆ ಮಾತ್ರ ಅವರಿಗೆ ಉಳಿಗಾಲ ಎಂದು ತಿಳಿಸಿದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ