ಶಿಡ್ಲಘಟ್ಟದಲ್ಲಿ ಶಿವರಾತ್ರಿ ಪ್ರಯುಕ್ತ ಶಿವೋತ್ಸವ ಕಾರ್ಯಕ್ರಮ
ಶಿಡ್ಲಘಟ್ಟ:: ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಶಿವೋತ್ಸವ ಕಾರ್ಯಕ್ರಮಕ್ಕೆ ಭಕ್ತಾದಿಗಳಾದ ನೀವೆಲ್ಲರೂ ಸೇರಿರುವುದಕ್ಕೆ ಆ ಭಗವಂತ ನಿಮ್ಮೆಲ್ಲರಿಗೂ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದ ಖುಷಿ ಡೆವಲಪರ್ ರವಿ ಬಿಳಿ ಶಿವಾಲೆ
ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ಮತ್ತು ವರವಲಯದ ದಿಬ್ಬೂರಳ್ಳಿಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವೇದಿಕೆಯಲ್ಲಿ ಶಿವೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಈ ಕಾರ್ಯಕ್ರಮವನ್ನು ಖುಷಿ ಡೆವಲಪರ್ ಆದ ಬಿಳಿ ಶಿವಾಲಿ "ರವಿ" ಹಾಗೂ ಲಕ್ಷ್ಮಿ ಸ್ಕೂಲ್ "ದೇವರಾಜ್" ಮತ್ತು ಬಜರಂಗದಳದ ತಾಲ್ಲೂಕು ಸಂಯೋಜಕ ವೆಂಕಟೇಶ್ ಆಯೋಜನೆ ಮಾಡಿದ್ದರು. ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಸ್ಕೂಲ್ ದೇವರಾಜ್ ಶಿವ ಪರಮೇಶ್ವರ ಇಂದು ಕೈಲಾಸದಿಂದ ಧರೆಗಿಳಿದು ಬಂದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸುದಿನ ಆಗಿದೆ ಭಕ್ತಾದಿಗಳು ಈ ದಿನವನ್ನು ಜಾಗರಣೆ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುವ ಪದ್ಧತಿ ಮೂಡಿಬಂದಿದೆ ಪ್ರತಿ ವರ್ಷವೂ ಭಕ್ತಾದಿಗಳಿಗೊಸ್ಕರ ಶಿವೋತ್ಸವ ಕಾರ್ಯಕ್ರಮವನ್ನು ಮಾಡೋಣವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯೋಜಕರಾದ ಬಜರಂಗದಳ ಸಂಯೋಜಕರು ವೆಂಕಟೇಶ್ ಮತ್ತು ಸ್ನೇಹಿತರು, ಬೈಕ್ ಶೋರೂಂ ದೇವರಾಜ್ ,ಬಿಜೆಪಿ ಮಂಜುಳಮ್ಮ, ಉಪಸ್ಥಿತರಿದ್ದರು.
Comments
Post a Comment