ಕಾಂಗ್ರೆಸ್ ವರಿಷ್ಠರು ರಾಜೀವ್ ಗೌಡರನ್ನ ಅಭ್ಯರ್ಥಿಯಾಗಿ ಘೋಷಿಸಲು ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ
ಶಿಡ್ಲಘಟ್ಟ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಭಿಮಾನಿಗಳ ವತಿಯಿಂದ ಹಂಡಿಗನಾಳ ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸೇವಕರ ಸಾರ್ಥಕ ಸೇವೆಗೆ ಸ್ವಾಭಿಮಾನಿ ಹೆಜ್ಜೆ ಎಂಬ ಸೇವೆಯ ಅಜೆಂಡಾ ದೊಂದಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರನ್ನ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹತ್ತಿರ ತೆರಳಲು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದ ಪೂರ್ವಭಾವಿ ಸಭೆ ಆಯೋಜಿಸಿದ್ದರು.
ನಗರಸಭೆ ಉಪಾಧ್ಯಕ್ಷ ಅಪ್ಸರ್ ಪಾಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ರಾಜೀವ್ ಗೌಡ ಎಂಬ ಸಮರ್ಥ ನಾಯಕನಿಗೆ ವರಿಷ್ಠರು ಟಿಕೆಟ್ ನೀಡಿದ್ದೆ ಆದರೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ ಪಕ್ಷಕ್ಕೆ ಬಲ ತುಂಬುವ ಶಕ್ತಿ ನಮ್ಮ ನಾಯಕನಿಗೆ ಇದೆ ಎಂದು ತಿಳಿಸಿದರು.
ಇನ್ನು ಪ್ರಮುಖ ಕಾಂಗ್ರೆಸ್ ಮುಖಂಡರು ಮಾತನಾಡಿ ಸುಮಾರು 2 ವರ್ಷಗಳಿಂದ ನಿರಂತರ ಸಮಾಜ ಸೇವೆಯ ಭಾಗವಾಗಿ ಉಚಿತ ದಿನಸಿ ಕಿಟ್ ಹಾಗೂ ಆರೋಗ್ಯ ದೃಷ್ಟಿಯಿಂದ 10 ಆಂಬುಲೆನ್ಸ್ ಸೇವೆ ಮಾಡುತ್ತಿರುವ ನಿಸ್ವಾರ್ಥ ನಾಯಕ ನಮ್ಮ ರಾಜೀವ್ ಗೌಡರು ಅಂತಹ ಕಮಿಟ್ಮೆಂಟ್ ಇರುವ ನಾಯಕನನ್ನು ಅಭ್ಯರ್ಥಿಯಾಗಿ ಘೋಷಿಸಬೇಕು ಇಲ್ಲದ ಪಕ್ಷದಲ್ಲಿ ರಾಜೀವ್ ಗೌಡರ ಏನೇ ನಿರ್ಧಾರ ಕೈಗೊಂಡರು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಜೊತೆಯಲ್ಲಿ ಇರುತ್ತೇವೆ ಎಂದು ತಿಳಿಸಿದರು.
ಹಾಲಿ ಶಾಸಕ ವಿ.ಮುನಿಯಪ್ಪ ರವರಿಗೆ ವಯಸ್ಸಾದ ಕಾರಣ ಅವರಿಗೆ ರಾಜಕೀಯಕ್ಕೆ ನಿಲ್ಲುವ ಆಸಕ್ತಿ ಇಲ್ಲದಿರುವ ಹಿನ್ನೆಲೆಯಲ್ಲಿ ಅವರು ಗೋವಿಂದ ಗೌಡ ಎಂಬುವವರನ್ನು ಅಭ್ಯರ್ಥಿ ಎಂದು ಘೋಷಿಸಿರುವುದು ಶಿಡ್ಲಘಟ್ಟ ತಾಲ್ಲೂಕಿನ ಯಾವೋಬ್ಬ ಕಾಂಗ್ರೆಸ್ ಕಾರ್ಯಕರ್ತರಿಗು ಇಷ್ಟವಿಲ್ಲ ತಾವು ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯಲ್ಲಿ ಇದ್ದಾಗ ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ನಿಮ್ಮ ಭಾವಚಿತ್ರ ಬಳಸಿಕೊಂಡು ಬಡವರ ಸೇವೆ ಮಾಡಿರುವ ರಾಜೀವ್ ಗೌಡರಿಗೆ ಅಭ್ಯರ್ಥಿಯಾಗಿ ಘೋಷಿಸಲು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು.
ಸುಮಾರು 300 ಕಾರುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರನ್ನು ಮಾತನಾಡಲು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೊರಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮತ್ತು ಸದ್ಯಸರು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು,ಎಬಿಡಿ ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು.
Comments
Post a Comment