ಚುನಾವಣಾ_ನೀತಿ_ಸಂಹಿತೆ_ಎಂದರೇನು? CODE OF CONDUCT
ಭಾರತದ ಚುನಾವಣಾ ಆಯೋಗವು ಇಂದು ಕರ್ನಾಟಕ ವಿಧಾನಸಭೆ ಚುನಾವಣೆ-2023 ದಿನಾಂಕವನ್ನು ಘೋಷಣೆ ಮಾಡಿದೆ. ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆಯ ಅವಧಿಯಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಆಯೋಗದ ಪ್ರತಿಯೊಂದು ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಚುನಾವಣಾ ಆಯೋಗದ ಆದೇಶವನ್ನು ಪಾಲಿಸದಿದ್ದರೆ ಸಂಬಂಧಪಟ್ಟ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ಆಯೋಗಕ್ಕೆ ಇರುತ್ತದೆ. ಈಗ ಅಂತಹ ಪರಿಸ್ಥಿತಿಯಲ್ಲಿ ಈ ಚುನಾವಣಾ ನೀತಿ ಸಂಹಿತೆ ಎಂದರೇನು ಎಂಬುದನ್ನು ತಿಳಿಯುವ ಅಗತ್ಯವಿರುತ್ತದೆ. ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಚುನಾವಣಾ ಘೋಷಣೆಯಾದ ನಂತರ ಜಾರಿಗೆ ತರುತ್ತದೆ ಮುಕ್ತ ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆಗಳು ನಡೆಯಬೇಕೆಂಬ ಉದ್ದೇಶದಿಂದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಇದನ್ನು ಪಾಲಿಸಬೇಕು ಈ ನೀತಿ ಸಹಿಷ್ಣತೆಯ ಪ್ರಕಾರ ಸಮುದಾಯಗಳ ನಡುವೆ ವೈ ಮನಸ್ಸು ತರಿಸುವುದು, ದ್ವೇಷ ಹುಟ್ಟುವಂತ ಟೀಕೆಗಳನ್ನು ಮಾಡುವುದು, ಜಾತಿಗಳ ಆಧಾರದ ಮೇಲೆ ಮತ ಕೋರುವುದು, ಚರ್ಚ್ ದೇವಸ್ಥಾನ ಅಥವಾ ಮಸೀದಿಗಳಲ್ಲಿ ಮತ ಯಾಚಿಸುವುದು ಭ್ರಷ್ಟಾಚಾರದ ಚಟುವಟಿಕೆಗಳಲ್ಲಿ ತೊಡಗಿ ಮತದಾರರಿಗೆ ಲಂಚ ನೀಡುವುದು, ಭಯಹುಟ್ಟಿಸುವುದು, ಪ್ರಾಕ್ಸಿ ಮತ ಚಲಾವಣೆ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಆಡಳಿತದಲ್ಲಿರುವ ರಾಜಕೀಯ ಪಕ್ಷ ಸರ್ಕಾರಿ ಯಂತ್ರವನ್ನು ದುರ್ಬಲಕ್ಕೆ ಮಾಡಿದಂತೆ ನೀತಿ ಸಹಿಷ್ಣತೆ ಕಟ್ಟೆಚ್ಚರ ವಹಿಸುತ್ತದೆ, ಯಾವುದೇ ಜನಪ್ರಿಯ ಯೋಜನೆಗಳನ್ನು ಸರ್ಕಾರಗಳು ಘೋಷಿಸುವಂತಿಲ್ಲ. ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಆಯೋಗದ ಅನುಮತಿ ಕಡ್ಡಾಯ. ಮತದಾನ ದಿನ ಶಾಂತಿಯುತ ಮತದಾನಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಲು ಈ ನೀತಿ ಅನುವು ಮಾಡಿಕೊಡುತ್ತದೆ. ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಮುಗಿಯುವವರೆಗೂ ಚುನಾವಣಾ ನೀತಿ ಜಾರಿಯಲ್ಲಿರುತ್ತದೆ. ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಈ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ವಿವಿಧ ಸೆಕ್ಷನ್ ನಲ್ಲಿ ರ ಪ್ರಕಾರ ಶಿಕ್ಷೆಯನ್ನು ಹಾಗೂ ದಂಡವನ್ನು ವಿಧಿಸಲಾಗುತ್ತದೆ.
Comments
Post a Comment