ಸಾರ್ಥಕ ಬದುಕಿನ ಸಾಧಕ ಆರಕ್ಷಕ. ಧನಂಜಯ್.
ಸಮಸ್ತ ನಾಡಿನ ಎಲ್ಲಾ ರಕ್ತಧಾನಿಗಳಿಗೆ. ವಿಶ್ವ ರಕ್ತಧಾನಿಗಳ ದಿನಾಚರಣೆ ಶುಭಾಶಯಗಳು.
ರಕ್ತಧಾನ-ಜೀವಧಾನ.
ತುರ್ತು ಅಪಘಾತ ಸಂದರ್ಭದಲ್ಲಿ ಅತೀ ಕ್ಲಿಷ್ಟಕರ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತವಾಗಿ ಓ ನೆಗೆಟಿವ್ ಗುಂಪಿನ ರಕ್ತಧಾನ ಮಾಡುವ ಸಾರ್ಥಕ ಬದುಕಿನ ಸಾಧಕ ಆರಕ್ಷಕ. ಧನಂಜಯ್....
ವಿಶ್ವದಲ್ಲೇ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯವಿರುತ್ತದೆ. ಅನೇಕರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುವುದು ಉಂಟು. ಅದಕ್ಕಾಗಿಯೇ ರಕ್ತವನ್ನು ಜೀವದ್ರವ್ಯ ಎನ್ನಲಾಗುತ್ತದೆ.ಇದರ ಭಾಗವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೊಬ್ಬರು ತಮ್ಮ ಕರ್ತವ್ಯದ ಜೊತೆ ಜೊತೆಗೆ ಒಂದಲ್ಲ ಒಂದು ಮಾನವೀಯತೆ ಮೆರೆಯುವ ಕಾರ್ಯಗಳನ್ನು ಮಾಡುತ್ತ ವಿಭಿನ್ನವಾಗಿ ಜನರ ಗಮನ ಸೆಳೆಯುತ್ತಿದ್ದಾರೆ ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧನಂಜಯ್ ಎನ್ನುವವರು ತಮ್ಮ ಸಾರ್ಥಕತೆಯ ಬದುಕಿನಲ್ಲಿ ಎಲೆ ಮರಿ ಕಾಯಿಯಂತೆ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತ ಯುವಕರಿಗೆ ಮಾದರಿಯಗುವ ಮೂಲಕ ತಮ್ಮ ನಿಜ ಜೀವನದ ಬದುಕಿನಲ್ಲಿ ಸಾರ್ಥಕ ಬದುಕಿನ ಸಾಧಕರಾಗಿದ್ದಾರೆ.
ಹೌದು. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಹ ಸುಸ್ತಾಗಿ ರಸ್ತೆಯಲ್ಲಿ ಬಿದಿದ್ದ ಮಹಿಳಾ ರೋಗಿಯೊಬ್ಬರನ್ನು ಸ್ವತಃ ತಾವೇ ತಮ್ಮ ದ್ವಿ ಚಕ್ರ ವಾಹನದಲ್ಲಿ ಆಸ್ವತ್ರೆಗೆ ಕರೆದೋಯ್ಯುದು ಚಿಕಿತ್ಸೆಯನ್ನು ನೀಡಿಸಿ ಮಾನವೀಯತೆ ಮೆರೆದಿದ್ದರು.
ಶಿಡ್ಲಘಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಯುವಕರನ್ನೆಲ್ಲ ಒಟ್ಟುಗೂಡಿಸಿಕೊಂಡು ಪರಿಸರ ಕಾಳಜಿಯನ್ನು ಬೆಳೆಸುವುದು ಸ್ವಯಂ ಪ್ರೇರಿತರಾಗಿ ರಕ್ತಧಾನವನ್ನು ಮಾಡಲು ಪ್ರೆರೆಪಿಸುತ್ತಿದ್ದರು. ತಮ್ಮ ವಿದ್ಯಾರ್ಥಿ ಜೀವದಲ್ಲಿ ರಕ್ತಧಾನವನ್ನು ಮಾಡಲು ಪ್ರಾರಂಬಿಸಿದ ಇವರು ಇಂದಿಗೆ 13ನೇ ಭಾರಿ ರಕ್ತಧಾನವನ್ನು ಮಾಡಿದ್ದರೆ.
ವಿಶ್ವ ರಕ್ತದಾನಿಗಳ ದಿನದಂದು ರಾಷ್ಟ್ರೀಯ ಮತ್ತು ಸ್ಥಳೀಯ ಅಭಿಯಾನಗಳನ್ನು ಬಲಪಡಿಸುವ ಮೂಲಕ ಸ್ವಯಂಪ್ರೇರಿತ ರಕ್ತದಾನಿಗಳ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಹಾಗೂ ಇದನ್ನು ಎಲ್ಲೆಡೆ ವಿಸ್ತರಿಸುವ ಕೆಲಸ ನಡೆಯಲಿದೆ. ರಕ್ತದಾನವನ್ನು ಉತ್ತೇಜಿಸುವುದು, ರಕ್ತದಾನ ಮಾಡುವ ಮೂಲಕ ಜೀವಗಳನ್ನು ಉಳಿಸಲು ಜನರನ್ನು ಪ್ರೇರೇಪಿಸುವ ಪ್ರತಿಯೊಬ್ಬ ರಕ್ತಧಾನಿಗೂ ನನ್ನದೊಂದು ಸಲಾಂ.
Comments
Post a Comment