ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿಡ್ಲಘಟ್ಟ ನಗರ ಸಮಿತಿಯ ನೂತನ ಪದಾಧಿಕಾರಿಗಳ ನೇಮಕ



ಶಿಡ್ಲಘಟ್ಟ: ಡಾಕ್ಟರ್ ಬಾಬ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣ , ಸಂಘಟನೆ,ಹೋರಾಟ, ಆದರ್ಶ ತತ್ವ ಸಿದ್ಧಾಂತಗಳಲ್ಲಿ ಒಂದಾದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಶೋಚಿತ ಸಮುದಾಯಕ್ಕೆ ನ್ಯಾಯ ಕೊಡಲು ಬಲ ಸಿಗುತ್ತದೆ ಹಾಗೂ ಸಂಘಟನೆ ಪ್ರೇರಣೆ ಆಗುತ್ತದೆ ಇದರ ಭಾಗವಾಗಿ ಶಿಡ್ಲಘಟ್ಟ ನಗರ ಸಮಿತಿ ಮತ್ತು ನೂತನವಾಗಿ ನಗರ ಸಂಚಾಲಕರಾಗಿ  ಡಿ.ಎಂ.ಮುನಿರಾಜು ಆಯ್ಕೆ ಆಗಿರುವುದಕ್ಕೆ ಸಂತೋಷ ತಂದಿದೆ ಮುಂದಿನ ದಿನಗಳಲ್ಲಿ ದೀನದಲಿತರ,ಶೋಚಿತರ, ಧ್ವನಿ ಇಲ್ಲದವರ ಪರವಾಗಿ ಧ್ವನಿಯಾಗಲು ಸಮುದಾಯಕ್ಕೆ ನಿಮ್ಮ ಸೇವೆ ಇರಲೆಂದು ಬಯಸುತ್ತೇನೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ಗೊರಮಡಗು ನಾರಾಯಣಸ್ವಾಮಿ ಹೇಳಿದರು.

ನಗರದ ಪ್ರವಾಸ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಿಡ್ಲಘಟ್ಟ ನಗರ ಸಮಿತಿಯ ನೂತನ ಪದಾಧಿಕಾರಿಗಳ ನೇಮಕವನ್ನು ಜಿಲ್ಲಾ ಸಂಘಟನಾ ಸಂಚಾಲಕ ನಾರಾಯಣಸ್ವಾಮಿ ನೇತೃತ್ವದಲ್ಲಿ ತಾಲ್ಲೂಕು ಸಂಚಾಲಕ ಯಾಮ ನಾರಾಯಣಸ್ವಾಮಿ ಮತ್ತು ಕಾನೂನು ಸಲಹಾ ಸಮಿತಿ ಮುಖಂಡ ರಾಮಕೃಷ್ಣ ಇವರುಗಳು ನಗರದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿಡ್ಲಘಟ್ಟ ನಗರ ಸಮಿತಿಯ ನೂತನ ಪದಾಧಿಕಾರಿಗಳಾಗಿ
ನಗರ ಸಂಚಾಲಕರಾಗಿ ಡಿ.ಎಂ ಮುನಿರಾಜು,ಸಂಘಟನಾ ಸಂಚಾಲಕರಾಗಿ ಬಿವಿ ರಘು,ಎಸ್ ಎಂ ಮುನಿರಾಜು,ಎ ಮಂಜುನಾಥ್,ಎಂ.ಮಂಜುನಾಥ್, ಮುನಿರಾಜು, ಖಜಾಂಚಿ ಶ್ರೀನಿವಾಸ್,  ಸದ್ಯಸರಾಗಿ ಬಾಬು,ಹರಿ, ಮನೋಹರ್, ವೆಂಕಟೇಶ್, ಇವರನ್ನು ಇಂದಿನಿಂದಲೇ ಜಾರಿ ಮಾಡಲಾಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪ್ರಕಾಶ್, ರಂಜಿತ್, ರಾಮಾಂಜಿ, ನರಸಿಂಹಮೂರ್ತಿ, ಹಾಜರಿದ್ದರು.



Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ