ಮಹನೀಯರ ತ್ಯಾಗ ಬಲಿದಾನದ ಸ್ವಾತಂತ್ರ್ಯೋತ್ಸವಕ್ಕೆ 77ರ ಸಂಭ್ರಮ

ಶಿಡ್ಲಘಟ್ಟ: 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಗೊರಮಡಗು ಗ್ರಾಮದಲ್ಲಿ ಒಂದು ಅರ್ಥಪೂರ್ಣವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್,ಕಲಿಕಾ ಸಾಮಾಗ್ರಿಗಳು, ಶಾಲೆಗೆ ಗಡಿಯಾರ ಮತ್ತು ಆಸನಗಳನ್ನು ನೀಡಿರುವುದು ಶ್ಲಾಘನೀಯ ಸರ್ಕಾರಿ ಶಾಲೆಗಳು ಈಗಾಗಲೇ ಅಳಿವಿನಂಚಿನಲ್ಲಿ ಇದೆ ಶಾಲೆಗಳನ್ನು ಉಳಿಸುವ ಪ್ರಯತ್ನ ಗ್ರಾಮಸ್ಥರು ಮಾಡಬೇಕಿದೆ ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರಕಿದರೆ ಈ ಸ್ವಾತಂತ್ರ್ಯ ದಿನಾಚರಣೆಯ ಹಬ್ಬಕ್ಕೆ ಒಂದು ಅರ್ಥ ಸಿಕ್ಕಂತ್ತೆ ಎಂದು ಹೇಳಿದ ಪತ್ರಕರ್ತ ಮೈತ್ರಿ ಲೋಕೇಶ್.
ಗೊರಮಡಗು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ನಾವು ಸ್ವತಂತ್ರರಾಗಿ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಪೂರ್ವಜರ ತ್ಯಾಗ ಬಲಿದಾನದ ಸಂಕೇತವೇ ಈ ಸ್ವತಂತ್ರೋತ್ಸವ ಸಂಭ್ರಮ ಬ್ರಿಟಿಷರ ಕೈ ಮುಷ್ಟಿಯಲ್ಲಿದ್ದ ಭಾರತವನ್ನು ಲೆಕ್ಕಕ್ಕಿಲ್ಲದಷ್ಟು ದೇಶ ಪ್ರೇಮಿಗಳು ಸೆರೆವಾಸ ಅನುಭವಿಸಿ ಪ್ರಾಣ ತ್ಯಾಗ ಮಾಡಿರುವ ಕಾರಣ ನಮಗೆ 1947 ರಲ್ಲಿ ಅಗಸ್ಟ್ 15 ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಸಾವಿರಾರು ವರ್ಷಗಳ ಗುಲಾಮಗಿರಿಯಿಂದ ಮುಕ್ತಿ ಸಿಕ್ಕಿ ಸ್ವೆಚ್ಚ ಸ್ವತಂತ್ರರಾಗಿ ಜೀವಿಸುತ್ತಿದ್ದೇವೆ ಪ್ರತಿ ವರ್ಷ ಆಗಸ್ಟ್ 15 ರಂದು ಜಾತಿ ಧರ್ಮ ಇಲ್ಲದೇ ಆಚರಣೆ ಮಾಡುವ ಮೂಲಕ ನಾವೆಲ್ಲ ಭಾರತೀಯರು ಸಂಭ್ರಮದಿಂದ ಈ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕು ಎಂದು ಹೇಳಿದರು.

ಗೊರಮಡಗು ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಕಲಿಕಾ ಸಾಮಗ್ರಿಗಳನ್ನು ಪತ್ರಕರ್ತ ಮೈತ್ರಿ ಲೋಕೇಶ್, ಆಸನಗಳ ವ್ಯವಸ್ಥೆಯನ್ನು ದೇವಿರಪ್ಪ,ಮುನಿನಾರಾಯಣಸ್ವಾಮಿ,ಗೋಪಾಲಗೌಡ, ಡೀಶ್ ಮಂಜುನಾಥ್,ಎನ್ ಎಸ್ ನಾರಾಯಣಸ್ವಾಮಿ,ಆನಂದ್, ರಾಜೇಶ್,ದೇವರಾಜ್, ಸರ್ಕಾರಿ ಶಾಲೆಗೆ ಅಳಿಲು ಸೇವೆ ಮಾಡುವ ಮೂಲಕ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡರು.
ಮಕ್ಕಳಿಂದ ನೃತ್ಯ ಪ್ರದರ್ಶನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲೆಯ ಶಿಕ್ಷಕರು ಮತ್ತು ಶಿಕ್ಷಕಿಯರು ಆಯೋಜನೆ ಮಾಡಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್,ಮಾಜಿ ಅಧ್ಯಕ್ಷ ಸದಸ್ಯ ವೆಂಕಟರೋಣಪ್ಪ,ಮಂಜುನಾಥ್, ಮುನಿವಿರಪ್ಪ ಪಿಳ್ಳಾಂಜಿನಪ್ಪ, ಮಂಜುನಾಥ್,ಕೃಷ್ಣಪ್ಪ, ಗಂಗರಾಜು ಮತ್ತು ಗ್ರಾಮಸ್ಥರು,ಪೋಷಕರು, ಯುವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ