ವಿದ್ಯುತ್ ಸ್ಪರ್ಶಿಸಿ ಒಂದನೇ ತರಗತಿ ಮಗು ನಿಧನ

ಶಿಡ್ಲಘಟ್ಟ ತಾಲ್ಲೂಕಿನ ಟಿ. ಪೆದ್ದನಹಳ್ಳಿ ಗ್ರಾಮದಲ್ಲಿ ಗೊರಮಡಗು ಗ್ರಾಮದ ರಾಜೇಶ್ ಮಗನಾದ ಮುಖಲ್ ಎಂಬ 7 ವರ್ಷದ ಮಗು ಆಟ ಆಡುತ್ತಾ ವಿದ್ಯುತ್ ವೈಯರ್ ಸ್ಪರ್ಶಿಸಿ ಮೂರ್ಚೆ ತಪ್ಪಿರುತ್ತಾನೆ ಕೂಡಲೇ ಅಲ್ಲಿದ್ದ ಅವರ ಸಂಬಂಧಿಕರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆಯೇ ಪ್ರಾಣ ಹೋಗಿದೆ ಎಂದು ವೈದ್ಯರು ಗೊತ್ತು ಪಡಿಸುತ್ತಾರೆ. ಸರ್ಕಾರಿ ಆಸ್ಪತ್ರೆಯ ಬಳಿ ಅವರ ತಂದೆ ತಾಯಿ ಮತ್ತು ಸಂಬಂಧಿಕರ ಅಳಲು ಮುಗಿಲು ಮುಟ್ಟಿತ್ತು , ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಾಜೇಶ್ವರಿ ಸ್ಥಳಕ್ಕೆ ಧಾವಿಸಿ ಘಟನೆಯನ್ನು ವಾಸ್ತವವನ್ನು ಪರಿಶೀಲಿಸಿ ಸಹಜ ಸಾವು ಆಗಿದೆ ಎಂದು ತಂದೆ ಕಂಪ್ಲೇಂಟ್ ನೀಡಿರುತ್ತಾರೆ ನಂತರ ಮುಂದಿನ ಕ್ರಮ ಕೈಗೊಂಡು ಮಗುವನ್ನು ಪೋಸ್ಟ್ ಮಾರ್ಟಂ ಮಾಡಿ ಅವರ ಸಂಬಂಧಿಕರಿಗೆ ಡಿಸ್ಚಾರ್ಜ್ ಮಾಡಿರುತ್ತಾರೆ.
ಪೋಷಕರಿಗೆ ಈ ವಿಷಯವು ಬಹಳ ಅಲೋಚನೆ ಮಾಡುವ ಒಂದು ನೈಜ ಘಟನೆ ತಮ್ಮ ಮಕ್ಕಳಿಗೆ ವಿದ್ಯುತ್ ಯಾವುದು ಬೇರೆ ಏನು ಎಂದು ಗೊತ್ತಿರುವುದಿಲ್ಲ ದಯವಿಟ್ಟು ಜಾಗೃತಿ ವಹಿಸಿ ಮಕ್ಕಳನ್ನು ಕಾಪಾಡಿಕೊಂಡು ರಕ್ಷಣೆ ಮಾಡಲು ಇದೊಂದು ಘಟನೆ ನಡೆದಿದೆ ಎಂದು, ಎಂದರೆ ತಪ್ಪಾಗಲಾರದು, ಇನ್ನು ಲೋಕಜ್ಞಾನ ಏನು ಅರಿವಿಲ್ಲದೆ ಇರುವ ಮಕ್ಕಳು ಪೋಷಕರ ಮುಂದೆಯೇ ಪ್ರಾಣ ಬಿಟ್ಟಿರುವುದು ಬರಿಸಲಾಗದ ದೊಡ್ಡ ನೋವು ಇಂತಹ ದುಃಖದ ದುರ್ಘಟನೆ ಯಾರ ಮನೆಯಲ್ಲೂ ಸಹ ಆಗಬಾರದೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ 


Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ