ಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಪಾರ್ವತಮ್ಮ ಮತ್ತು ಉಪಾಧ್ಯಕ್ಷರಾಗಿ ನರೇಂದ್ರ ಆಯ್ಕೆ
ಶಿಡ್ಲಘಟ್ಟ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜೆಡಿಎಸ್ ಕೃಪೆಯಿಂದ ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್, ಹಾಗೂ ಉಪಾಧ್ಯಕ್ಷರಾಗಿ ನರೇಂದ್ರ ಅವರನ್ನು ಚುನಾವಣೆಯ ಮುಕ್ತ ಮತದಾನದ ಮುಖಾಂತರ ಆಯ್ಕೆ ಮಾಡಲಾಯಿತು.
ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯು ತೀವ್ರ ಕುತೂಹಲ ಕೆರಳಿಸಿತ್ತು ಕೊತ್ತನೂರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು ಒಟ್ಟು ಹನ್ನೊಂದು ಜನ ಸದಸ್ಯರ ಪೈಕಿ ಎರಡು ಮಹಿಳೆಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುತ್ತಾರೆ ಎರಡು ಮಹಿಳೆಯರು ನಾಮ ಪತ್ರ ಸಲ್ಲಿಸಿರುತ್ತಾರೆ ಅದರಲ್ಲಿ ಗೊರಮಡಗು ಪಾರ್ವತಮ್ಮ ಶ್ರೀನಿವಾಸ್ ರವರಿಗೆ ಒಟ್ಟು 6 ಮತಗಳು ಆಕಿರುತ್ತಾರೆ ತಮ್ಮ ಪ್ರತಿಸ್ಪರ್ಧಿಗೆ ಐದು ಮತಗಳು ಮಾತ್ರ ಬಿದ್ದಿರುತ್ತದೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಾರ್ವತಮ್ಮ ಶ್ರೀನಿವಾಸ್ ಅಧ್ಯಕ್ಷೆಯಾಗಿ ಆಯ್ಕೆಯಾಗಿರುತ್ತಾಳೆ .
ಇನ್ನು ಉಪಾಧ್ಯಕ್ಷ ಸ್ಥಾನಕ್ಕಾಗಿ ಒಟ್ಟು ಮೂರು ಜನ ನಾಮ ಪತ್ರ ಸಲ್ಲಿಸಿರುತ್ತಾರೆ ಅದರಲ್ಲಿ ಒಬ್ಬರು ನಾಮ ಪತ್ರ ಹಿಂಪಡೆದಿರುತ್ತಾರೆ ಇನ್ನು ಉಳಿದ ಇಬ್ಬರು ಸ್ಪರ್ಧೆಯಲ್ಲಿ ಇರುತ್ತಾರೆ ಚುನಾವಣೆ ಮುಗಿದ ನಂತರ ಫಲಿತಾಂಶದಲ್ಲಿ ನರೇಂದ್ರ ರವರಿಗೆ 8 ಮತ ಬಂದಿರುತ್ತಾದೆ ನಾರಾಯಣಸ್ವಾಮಿ ರವರಿಗೆ ಕೇವಲ 3 ಮತಗಳನ್ನು ಮಾತ್ರ ನೀಡಿರುತ್ತಾರೆ ಫಲಿತಾಂಶ ನರೇಂದ್ರ 8 ಮತಗಳಿಂದ ಗೆದ್ದು ಉಪಾಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ.
ಅಧ್ಯಕ್ಷ ಸ್ಥಾನದ ಮಹಿಳಾ ಮೀಸಲು ಸ್ಥಾನಕ್ಕೆ ಕೆಲವು ಕಾಲ ಗೊಂದಲ ಸೃಷ್ಟಿ ಸಹ ಉದ್ಭವಿಸಿತು ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕಾಗಿ ಗೊರಮಡಗು ಗ್ರಾಮದ ಪರಿಶಿಷ್ಟ ಜಾತಿ ಪಾರ್ವತಮ್ಮ ಸಾಮಾನ್ಯ ಮಹಿಳೆ ಸ್ಥಾನದಿಂದ ಗೆದ್ದು ಪಂಚಾಯಿತಿ ಸದಸ್ಯ ಆಗಿದ್ದ ಕಾರಣ ಮೀಸಲು ಕ್ಷೇತ್ರಕ್ಕೆ ಊರ್ಜಿತ ಆಗಿರುತ್ತಾಳೆ ಎಂದು ಚುನಾವಣೆ ಗೊತ್ತು ಪಡಿಸುವ ಅಧಿಕಾರಿ ಮಂಜುಳಾ ಸ್ಪಷ್ಟಪಡಿಸಿ ಇರುತ್ತಾಳೆ. ಕೆಲವು ಸದಸ್ಯರು ಇದನ್ನೇ ಪ್ರಶ್ನೆ ಮಾಡಿ ಪರಿಶಿಷ್ಟ ಜಾತಿ ಮಹಿಳೆ ಈಗಾಗಲೇ ಒಬ್ಬರು ಇರುವುದರಿಂದ ಸಾಮಾನ್ಯ ಮಹಿಳೆ ಸ್ಥಾನದಲ್ಲಿ ಗೆದ್ದಿರುವವರನ್ನು ಹೇಗೆ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿಕೊಂಡಿರುತ್ತೇರೆ ಇದು ಸಂವಿಧಾನದ ವಿರೋಧಿ ನಡೆ ನಾನು ಕೋರ್ಟ್ ಮುಖಾಂತರ ಅಧ್ಯಕ್ಷೆ ಸ್ಥಾನಕ್ಕೆ ಸ್ಟೇ... ತೆಗೆದುಕೊಂಡು ಬರುತ್ತೇನೆ ಎಂದು ಪ್ರಶ್ನೆ ಮಾಡಿದ ಎ.ಪಂಚಾಕ್ಷರಿ ರೆಡ್ಡಿ.
ಇನ್ನು ಮೊದಲ ಬಾರಿಗೆ ಅಧ್ಯಕ್ಷರಾದ ಪಾರ್ವತಮ್ಮ ಶ್ರೀನಿವಾಸ್ ಮಾತನಾಡಿ ನನಗೆ ಅಧ್ಯಕ್ಷೆ ಆಗಲು ಮತ ನೀಡಿ ಸಹಕರಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು. ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕೊತ್ತನೂರು ಗ್ರಾಮಪಂಚಾಯಿತಿಗೆ ನೂತನವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಗಿರುವ ಇಬ್ಬರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ ಪಕ್ಷ ಬೇಧವಿಲ್ಲದೆ ಎಲ್ಲಾರಿಗೂ ಸಮಾನವಾದ ನ್ಯಾಯ ಕೊಡುತ್ತೇವೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಕೊತ್ತನೂರು ದೇವರಾಜ್, ಮಾಜಿ ಅಧ್ಯಕ್ಷ ಮಂಜುನಾಥ್, ಕೊತ್ತನೂರು ಪತಿ, ಕೊತ್ತನೂರು ಮಂಜಣ್ಣ,ಸದಸ್ಯ ವೆಂಕಟರೋಣಪ್ಪ, ,ವೆಂಕಟೇಶ್ ಮುನಿಕೃಷ್ಣ, ಮುನಿಯಪ್ಪ ,ಶ್ರೀನಿವಾಸ್, ಚಂದ್ರು, ನರೇಂದ್ರ,ರವಿ, ವೆಂಕಟೇಶ್, ಸೀನಪ್ಪ, ಗೋವಿಂದಪ್ಪ, ಮಂಜಣ್ಣ, ಮುನಿವೀರಪ್ಪ, ವೈ ಹುಣಸೆನಹಳ್ಳಿ ದೇವರಾಜ್,ಪುಡ್ ದೇವರಾಜ್, ಪ್ರಶಾಂತ್, ಕೊತ್ತನೂರು ಮುನಿರಾಜು,ಮುನಿವೆಂಕಟ,ಮುನಿಕುಮಾರ್ ಹಾಜರಿದ್ದರು.
Comments
Post a Comment