ಮಳೆಯ ಜೊತೆಯಲ್ಲಿ ಸಿಡಿಲು ಬಡಿದು ಆರು ಕುರಿಗಳು ಸಾವು!
ಶಿಡ್ಲಘಟ್ಟ: ಸುಮಾರು ಎರಡು ವರ್ಷಗಳಿಂದ ಸಾಕಿದ್ದ ಕುರಿಗಳು ರಾತ್ರಿ ಸಮಯದಲ್ಲಿ ರಬಸದ ಮಳೆಗೆ ಗುಡುಗು ಸಹಿತ "ಸಿಡಿಲು" ಬಡಿದು ಕುರಿಗಳ ಮಾರಣಹೋಮ ಆಗಿದೆ ಒಂದೊಂದು ಕುರಿ 15 ಸಾವಿರದಿಂದ 17 ಸಾವಿರ ಬೇಡಿಕೆ ಇತ್ತು 10 ಕುರಿಗಳಲ್ಲಿ ಆರು ಕುರಿಗಳು ಸಾವನಪ್ಪಿದೆ ಅದರ ಒಟ್ಟು ಮೌಲ್ಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುತ್ತಿದ್ದವು ಇದರಲ್ಲಿ ಎರಡು ಕುರಿಗಳು ಇನ್ನೇನು ವಾರದ ಒಳಗೆ ಮರಿ ಹಾಕುವ ಸಂಭವವಿತ್ತು ಎತ್ತರಕ್ಕೆ ಬೆಳೆದಿದ್ದ 4 ಟಗರುಗಳು ಸಾವನಪ್ಪಿದೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನನ್ನ ನೆರವಿಗೆ ಬರಬೇಕೆಂದು ತಮ್ಮ ಅಳಲನ್ನು ತೋಡಿಕೊಂಡ ರೈತ ಗೊರಮಡಗು ರಾಮಾಂಜಿನಪ್ಪ
ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಮಡಗು ಗ್ರಾಮದಲ್ಲಿ ನೆನ್ನೆ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಲು ತುಂಬಿ ಜಲಾವೃತವಾಗಿವೆ ಹಲವಾರು ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಸಹ ಆಗಿದೆ. ಗಾಳಿ ಮಳೆಗೆ ವಿದ್ಯುತ್ ತಂತಿಗಳು ಬಿದ್ದಿದಾವೆ ಇಷ್ಟೆಲ್ಲಾ ಅನಾಹುತಗಳಿಂದ ಒಂದುಕಡೆ ರೈತರ ಗೊಳಾದರೆ ಮತ್ತೊಂದು ವಿಷಾದನೀಯ ಸುದ್ದಿ ಎಂದರೆ ಅದು ಮಳೆಯ ಜೊತೆಯಲ್ಲಿ ಸಿಡಿಲು ಬಡಿದು ರೈತ ರಾಮಾಂಜಿನಪ್ಪ ರವರ ಆರು ಕುರಿಗಳು ಸಾವನ್ನಪ್ಪಿದ್ದವೆ ಎಂದು ರೈತ ತಮ್ಮ ಅಳಲನ್ನು ತೋಡಿಕೊಂಡರು.
ಇನ್ನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರೈತನ ನೆರವಿಗೆ ನಿಲ್ಲಬೇಕಿದೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರುವುದಿಲ್ಲ ಸುಮಾರು ವರ್ಷಗಳಿಂದ ಸಾಕಿದ್ದ ಕುರಿಗಳು ಆಕಸ್ಮಿಕವಾಗಿ ಸಿಡಿಲು ಬಡಿದು ಸತ್ತಿರುವುದಕ್ಕೆ ರೈತ ಕಂಗಾಲಾಗಿ ಏನು ಮಾಡಬೇಕೆಂದು ದಿಕ್ಕು ತೋಚದೇ ತಲೆ ಮೇಲೆ ಕೈ ಹಿಟ್ಟು ಕುಳಿತಿರುತ್ತಾನೆ ಈ ಸಮಯದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಇವರ ನೆರವಿಗೆ ಧಾವಿಸಿಲೆಂದು ಆಶಿಸೋಣ.
Comments
Post a Comment