ಕರ್ನಾಟಕ ಬಂದ್ ಕಾವೇರಿ ನೀರು - ನಮ್ಮ ಹಕ್ಕು ನಮ್ಮ ಅಸ್ತಿತ್ವ ಪೂರ್ವ ಭಾವಿ ಸಭೆ ಶಿಡ್ಲಘಟ್ಟ


ಶಿಡ್ಲಘಟ್ಟ ದಿನಾಂಕ 29-09-2023 ರಂದು ಕರ್ನಾಟಕ ಬಂದ್ ಮಾಡಲು ರಾಜ್ಯಾದ್ಯಂತ ಕನ್ನಡ ಸಂಘಟನೆಗಳ ಒಕ್ಕೂಟ  ತೀರ್ಮಾನ ಮಾಡಿದೆ ಇದರ ಭಾಗವಾಗಿ ಕನ್ನಡಿಗರಾದ ನಾವು ಈ ಬಂದ್ ಮಾಡಬೇಕಾ? ಬೇಡವಾ! ಎಂದು ಚರ್ಚೆ ಮಾಡಬೇಕಿದೆ...
ಕನ್ನಡ,ನಾಡು,ನುಡಿ,ನೆಲ ಜಲ,ಭಾಷೆ,ಅಂತ ಬಂದಾಗ ಕೈ ಕಟ್ಟಿ ಕೂತಾಗ ಅನ್ಯ ರಾಜ್ಯದವರು ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಾರೆ ಆದ್ದರಿಂದ ದಯವಿಟ್ಟು ನಾಳೆ ಅಂದರೆ ಮಂಗಳವಾರ ದಿನಾಂಕ 26-09-2023 ರಂದು ಶಿಡ್ಲಘಟ್ಟ ನಗರದ ಶ್ರೀ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಎಲ್ಲಾ ಕನ್ನಡ ಪರ,ರೈತ ಪರ, ಕಾರ್ಮಿಕ,ಪ್ರಗತಿಪರ,ದಲಿತ ಸಂಘಟನೆಗಳು ಮತ್ತು ಆಟೋ ಚಾಲಕರು ಮತ್ತು ವಿದ್ಯಾರ್ಥಿಗಳು ಹಾಗೂ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪೂರ್ವ ಭಾವಿ ಸಭೆಯಲ್ಲಿ  ತಮ್ಮ ಅನಿಸಿಕೆಗಳನ್ನು ತಿಳಿಯಪಡಿಸಬೇಕಾಗಿ ತಮ್ಮಲ್ಲಿ ಮನವಿ.
*ಬಂದ್ ನಂತರ ಮನವಿ ಪತ್ರವನ್ನು ತಹಶೀಲ್ದಾರ್ ರವರಿಗೆ ನೀಡುವುದು*
         *ನಮ್ಮ ಹಕ್ಕೊತಾಯಗಳು*
ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ಕರ್ನಾಟಕದಿಂದ ಒಂದು ಹನಿ ಸಹ ತಮಿಳು ನಾಡಿಗೆ ಬಿಡುವುದಿಲ್ಲ ಈ ಪ್ರತಿಯನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಮೋದಿ ರವರಿಗೆ ತಹಶಿಲ್ದಾರ್ ಮುಖಾಂತರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ನೀಡುವುದು.

ಸ್ಥಳ-ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ
ಸಮಯ -12 ಘಂಟೆಗೆ ಮದ್ಯಾಹ್ನ
*ಪ್ರಕಟನೆ: ಕನ್ನಡ ಸಂಘಟನೆಗಳ ಒಕ್ಕೂಟ ಶಿಡ್ಲಘಟ್ಟ*

ಈ ಸುದ್ದಿಯನ್ನು ಹೆಚ್ಚು ಜನಕ್ಕೆ ತಲುಪಿಸಲು ಗೌರವಾನ್ವಿತ ನಮ್ಮ ಕನ್ನಡದ ಸುದ್ದಿ ಮಾಧ್ಯಮದವರ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿಶೇಷವಾಗಿ ಆಹ್ವಾನ

            🙏🙏🙏 *ಧನ್ಯವಾದಗಳು* 🙏🙏🙏

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ