ಸಾರ್ವಜನಿಕರ ಕುಂದು ಕೊರತೆಗಳ ಆಲಿಸಲು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ಸಭೆ


ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ವತಿಯಿಂದ ತಾಲ್ಲೂಕು ಕಛೇರಿಯಲ್ಲಿ ಕುಂದುಕೊರತೆಗಳ ಅಹವಾಲು ಸಭೆಯನ್ನು ಆಯೋಜಿಸಲಾಗಿತ್ತು.

ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್ ಮಾತನಾಡಿ, ಪ್ರತಿ ವರ್ಷ ಕುಂದುಕೊರತೆ ಸಭೆಯನ್ನು ಇಟ್ಟುಕೊಳ್ಳುತ್ತೇವೆ, ಯಾರೋ ಗೊತ್ತಿದ್ದವರು ಶಕ್ತಿ ಇದ್ದವರು ಅವರ ಮನೆಯಲ್ಲೇ ಮಾಡಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ, ಯಾರಿಗೆ ಗೊತ್ತಾಗಲ್ವೋ, ಯಾರಿಗೆ ಆ ಶಕ್ತಿ ಇಲ್ವೋ, ಅಂತಹವರ ಕುಂದು ಕೊರತೆಗಳನ್ನು ತೆಗೆದುಕೊಂಡು ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲೇ ಪರಿಹರ ಕಂಡುಕೊಳ್ಳುತ್ತೇವೆ, ಒಂದು ವೇಳೆ‌ ಅದು ಹಾಗದೆ ಇದ್ದರೆ ನಿರ್ಧಿಷ್ಟ ಕ್ರಮ ಕೈಗೊಳ್ಳಲು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕುಂದುಕೊರತೆ ಸಭೆಯನ್ನು ಪ್ರತಿಯೊಂದು ತಾಲ್ಲೂಕಿನಲ್ಲಿ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ವಿವಿಧ ರೀತಿಯ ಒಟ್ಟು 14 ಅರ್ಜಿಗಳು. ಅದರಲ್ಲಿ ಕಂದಾಯ ಇಲಾಖೆ 6, ತಾಲ್ಲೂಕು ಪಂಚಾಯತಿ 2, ನಗರಸಭೆ 1, ಅಬಕಾರಿ 1, ಶಿಕ್ಷಣ ಇಲಾಖೆ 1, ಆಹಾರ ಇಲಾಖೆ 1, ಎಸಿ‌ ಕಛೇರಿ 1, ಹಾಲು ಉತ್ಪಾದಕ ಸಹಕಾರ ಸಂಘ 1, ಸ್ವೀಕೃತ ಗೊಂಡಿದ್ದವು, ಕೆಲವು ಅರ್ಜಿಗಳು ಸ್ಥಳದಲ್ಲೇ ಪರಿಹರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಇನ್ಪೆಕ್ಟರ್ ಮೋಹನ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಲೋಕಾಯುಕ್ತ ಸಿಬ್ಬಂದಿಗಳಾದ ರಮೇಶ್, ಮಾಳಪ್ಪ, ಗುರುಮೂರ್ತಿ, ಸೇರಿದಂತೆ, ತಾಲ್ಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಇದ್ದರು.

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ