ಸಂಸದರನ್ನು ಅಗೌರವದಿಂದ ವರ್ತನೆ ಶಾಸಕ‌ ನಾರಾಯಣಸ್ವಾಮಿ ಮತ್ತು ಎಸ್ಪಿ ವಿರುದ್ಧ ಕಾನೂನು ಕ್ರಮ ಜರುಗಿಸಲು ತಹಶಿಲ್ದಾರ್ ಸ್ವಾಮಿಗೆ ಮನವಿ -ಬಿಜೆಪಿ ಮುಖಂಡ ರಾಮಚಂದ್ರಗೌಡ



ಶಿಡ್ಲಘಟ್ಟ: ಶ್ರೀನಿವಾಸಪುರ ರೈತರಿಗೆ ಅನ್ಯಾಯವನ್ನು ಕೇಳಲು ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಹೋದಾಗ ಅಲ್ಲಿನ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ ಯವರು ಜನಪ್ರತಿನಿಧಿ ಎಂದು ತಿಳಿಯದೆ ಒಬ್ಬ ಸಂಸದರನ್ನು ಏಕವಚನದಲ್ಲಿ ನಿಂದಿಸಿ ಅವಮಾನ ಮಾಡಿ ಅವಾಚ್ಯ ಶಬ್ದ ಗಳಿಂದ ಬೈದಿರುತ್ತಾರೆ ಅವರ ಜೊತೆ ಎಸ್ಪಿ ಸಹ ಅವರಂತೆ ಕುಣಿದು ಗೇಟ್ ನಿಂದ ಹೊರಗೆ ಕಳಿಸಿರುವುದನ್ನು ಸಹಿಸಲಾಗುವುದಿಲ್ಲ ಅವರನ್ನು ಈ ಕೂಡಲೇ ಅಮಾನತ್ತು ಮಾಡಬೇಕು ಹಾಗೂ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಈ ದಲಿತ ವಿರೋಧಿ ರೈತ ವಿರೋಧಿ ಸರ್ಕಾರಕ್ಕೆ ನಮ್ಮ ಧಿಕ್ಕಾರವಿರಲಿ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರೇಗೌಡ ಆಕ್ರೋಶ ವ್ಯಕ್ತಪಡಿಸಿದರು .
ಶಿಡ್ಲಘಟ್ಟದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕಸಭಾ ಸಂಸದರಿಗೆ ಆದ ಅವಮಾನವನ್ನು ಖಂಡಿಸಿ ಇಂದು ಶಿಡ್ಲಘಟ್ಟ ತಾಲೂಕು ಕಛೇರಿ ಮುಂದೆ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು.‌ ಈ ಕೃತ್ಯವನ್ನು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಬಿಎನ್ ಸ್ವಾಮಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣ, ಬಿಜೆಪಿ ಮುಖಂಡ ಆನಂದ ಗೌಡ, ಯುವನಾಯಕ ಭರತ್,ಹಾಗೂ ಹಲವು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಸಂಸದ ಮುನಿಸ್ವಾಮಿಯನ್ನು ನಿಂದಿಸಿದ ಶಾಸಕ ನಾರಾಯಣಸ್ವಾಮಿಗೆ ಕಾನೂನು ಕ್ರಮ ಆಗಬೇಕು ಎಂದು ಪ್ರತಿಭಟನೆ 

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ