ಜನ ಸ್ನೇಹಿ ಧಕ್ಷ ಪ್ರಾಮಾಣಿಕ ಎಸಿಪಿ ಪ್ರಿಯದರ್ಶಿನಿ ಅವರ ಕಾರ್ಯವೈಖರಿಗೆ ಪೊಲೀಸ್ ಆಯುಕ್ತರಿಂದ ಮೆಚ್ಚುಗೆ.


ಬೆಂಗಳೂರು:- ನಗರದ ಮರುತ್ತಾಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಪ್ರಿಯದರ್ಶಿನಿ ಈಶ್ವರ್ ರವರನ್ನು ಇಂದು ಪೊಲೀಸ್ ಆಯುಕ್ತರಾದ ದಯಾನಂದ್ ಅವರು ಸಿ.ಎ.ಆರ್.ಉತ್ತರ ಘಟಕದ ಮೈದಾನದಲ್ಲಿ ಪ್ರಶಂಸನಾ ಪತ್ರವನ್ನು ನೀಡಿದರು.
ಈ ಹಿಂದೆ ಚಾಮರಾಜನಗರ ಉಪ ವಿಭಾಗದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ನಿಸ್ವಾರ್ಥವಾಗಿ ನ್ಯಾಯ ನೀಡುವ ಮೂಲಕ ಜನಪ್ರಿಯಗೊಂಡಿದ್ದರು.ತದ ನಂತರ ಚಾಮರಾಜನಗರದಿಂದ ಬೆಂಗಳೂರಿನ ಮರುತ್ತಾಹಳ್ಳಿ ಉಪ ವಿಭಾಗಕ್ಕೆ ಸಹಾಯಕ ಪೊಲೀಸ್ ಉಪಾಧಿಕ್ಷಕರಾಗಿ ವರ್ಗಾವಣೆಗೊಂಡು ಇಲ್ಲಿಯೂ ಸಹ ಸಾರ್ವಜನಿಕರೊಂದಿಗೆ ಜನ ಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಗಳಲ್ಲೂ ಅಪರಾಧ ವಿಮರ್ಶೆ ಸಭೆ ನಡೆಸುವುದು. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಠಾಣೆಯಲ್ಲಿನ ದಾಖಲಾತಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿರುವ ಬಗ್ಗೆ ತಮ್ಮ ಪ್ರಾಮಾಣಿಕತೆಯ ಕರ್ತವ್ಯವನ್ನು ಶ್ಲಾಘಿಸಿ ಪ್ರಶಂಸನ ಪತ್ರವನ್ನು ವಿತರಿಸಿದರು.    

Comments

Popular posts from this blog

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

'ಪೆನ್‌ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿಧ ಪ್ರಜ್ವಲ ರೇವಣ್ಣಬಂಧನಕ್ಕೆ ಯುವ ಕಾಂಗ್ರೆಸ್ ರಾಜ್ಯ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಆಗ್ರಹ