Posts

ಮಾನವನ ಕಳ್ಳ ಸಾಗಾಣಿಕೆಯನ್ನು ವಿರೋಧಿಸಿ ಕಟ್ಟಿ ಬದ್ಧರಾಗಿ ವಾಕ್ ಫಾರ್ ಫ್ರೀಡಂ ಸ್ವಾತಂತ್ರ್ಯ ನಡಿಗೆ ಜಾತಾ ಕಾರ್ಯಕ್ರಮದಲ್ಲಿ ಆರ್. ಮುನಿರಾಜು ಅಭಿಮತ

Image
ಶಿಡ್ಲಘಟ್ಟ ಜಂಗಮಕೋಟೆ: ಸಮಾಜದಲ್ಲಿ ಇದೀಗ ಮಾನವ ಕಳ್ಳ ಸಾಗಾಣಿಕೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದ್ದು, ಅದರಲ್ಲೂ ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಂಗಸರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆದು ಶಿಡ್ಲಘಟ್ಟ ಗ್ರಾಮಾಂತರ ಆರಕ್ಷಕ ಠಾಣೆಯ ಜಂಗಮಕೋಟೆ ವರ ಠಾಣಾ ಸಹಾಯಕ ಆರಕ್ಷಕ ಉಪ ನಿರೀಕ್ಷಕ ವಿ.ಸುಬ್ರಮಣಿ ತಿಳಿಸಿದರು. ಇವರು ಪಟ್ಟಣದ ಜಂಗಮಕೋಟೆ ವೃತ್ತದಲ್ಲಿ ಜೇಸಿಐ ದೇವನಹಳ್ಳಿ ಡೈಮಂಡ್ಸ್, ಮೂಮೆಂಟ್ ಇಂಡಿಯಾ ಹಾಗೂ ಆಂಧ್ರ ಪ್ರದೇಶದ ಮದನಪಲ್ಲಿಯ ಗ್ರಾಮ ಜ್ಯೋತಿ ಸೊಸೈಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಾಕ್ ಫಾರ್ ಫ್ರೀಡಂ ಮಕ್ಕಳ ಕಳ್ಳ ಸಾಗಾಣಿಕೆ ತಡೆಗಟ್ಟಲು ಜನಜಾಗೃತಿ ಮೂಡಿಸುವ ಸ್ವಾತಂತ್ರ್ಯ ನಡಿಗೆ ಜಾತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳನ್ನು ಪೋಷಕರು ತುಂಬಾ ಜಾಗೃತೆಯಿಂದ ಬೆಳೆಸಬೇಕು, ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರಗಳನ್ನು ತಿಳಿಸಿಕೊಡಬೇಕು ಹಾಗೂ ಮಾನವ ಕಳ್ಳ ಸಾಗಾಣಿಕೆಯ ಕಾಯ್ದೆ ಕಾನೂನುಗಳ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಿ ಇಂತಹ ಜಾತ, ಬೀದಿ ನಾಟಕ, ಅರಿವಿನ ಕರಪತ್ರ, ಗೋಡೆ ಬರಹ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸಿ ನಾವೆಲ್ಲರೂ ಶಾಂತಿಯುತವಾಗಿ ಈ ಮಾನವ ಕಳ್ಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡಬೇಕು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಪೋಷಕರ...

ಜನ ಸ್ನೇಹಿ ಧಕ್ಷ ಪ್ರಾಮಾಣಿಕ ಎಸಿಪಿ ಪ್ರಿಯದರ್ಶಿನಿ ಅವರ ಕಾರ್ಯವೈಖರಿಗೆ ಪೊಲೀಸ್ ಆಯುಕ್ತರಿಂದ ಮೆಚ್ಚುಗೆ.

Image
ಬೆಂಗಳೂರು:- ನಗರದ ಮರುತ್ತಾಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಪ್ರಿಯದರ್ಶಿನಿ ಈಶ್ವರ್ ರವರನ್ನು ಇಂದು ಪೊಲೀಸ್ ಆಯುಕ್ತರಾದ ದಯಾನಂದ್ ಅವರು ಸಿ.ಎ.ಆರ್.ಉತ್ತರ ಘಟಕದ ಮೈದಾನದಲ್ಲಿ ಪ್ರಶಂಸನಾ ಪತ್ರವನ್ನು ನೀಡಿದರು. ಈ ಹಿಂದೆ ಚಾಮರಾಜನಗರ ಉಪ ವಿಭಾಗದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ನಿಸ್ವಾರ್ಥವಾಗಿ ನ್ಯಾಯ ನೀಡುವ ಮೂಲಕ ಜನಪ್ರಿಯಗೊಂಡಿದ್ದರು.ತದ ನಂತರ ಚಾಮರಾಜನಗರದಿಂದ ಬೆಂಗಳೂರಿನ ಮರುತ್ತಾಹಳ್ಳಿ ಉಪ ವಿಭಾಗಕ್ಕೆ ಸಹಾಯಕ ಪೊಲೀಸ್ ಉಪಾಧಿಕ್ಷಕರಾಗಿ ವರ್ಗಾವಣೆಗೊಂಡು ಇಲ್ಲಿಯೂ ಸಹ ಸಾರ್ವಜನಿಕರೊಂದಿಗೆ ಜನ ಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಗಳಲ್ಲೂ ಅಪರಾಧ ವಿಮರ್ಶೆ ಸಭೆ ನಡೆಸುವುದು. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಠಾಣೆಯಲ್ಲಿನ ದಾಖಲಾತಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿರುವ ಬಗ್ಗೆ ತಮ್ಮ ಪ್ರಾಮಾಣಿಕತೆಯ ಕರ್ತವ್ಯವನ್ನು ಶ್ಲಾಘಿಸಿ ಪ್ರಶಂಸನ ಪತ್ರವನ್ನು ವಿತರಿಸಿದರು.    

ಸಾರ್ವಜನಿಕರ ಕುಂದು ಕೊರತೆಗಳ ಆಲಿಸಲು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ಸಭೆ

Image
ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ವತಿಯಿಂದ ತಾಲ್ಲೂಕು ಕಛೇರಿಯಲ್ಲಿ ಕುಂದುಕೊರತೆಗಳ ಅಹವಾಲು ಸಭೆಯನ್ನು ಆಯೋಜಿಸಲಾಗಿತ್ತು. ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್ ಮಾತನಾಡಿ, ಪ್ರತಿ ವರ್ಷ ಕುಂದುಕೊರತೆ ಸಭೆಯನ್ನು ಇಟ್ಟುಕೊಳ್ಳುತ್ತೇವೆ, ಯಾರೋ ಗೊತ್ತಿದ್ದವರು ಶಕ್ತಿ ಇದ್ದವರು ಅವರ ಮನೆಯಲ್ಲೇ ಮಾಡಿಸಿಕೊಳ್ಳುವ ಸಾಮರ್ಥ್ಯ ಇರುತ್ತದೆ, ಯಾರಿಗೆ ಗೊತ್ತಾಗಲ್ವೋ, ಯಾರಿಗೆ ಆ ಶಕ್ತಿ ಇಲ್ವೋ, ಅಂತಹವರ ಕುಂದು ಕೊರತೆಗಳನ್ನು ತೆಗೆದುಕೊಂಡು ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲೇ ಪರಿಹರ ಕಂಡುಕೊಳ್ಳುತ್ತೇವೆ, ಒಂದು ವೇಳೆ‌ ಅದು ಹಾಗದೆ ಇದ್ದರೆ ನಿರ್ಧಿಷ್ಟ ಕ್ರಮ ಕೈಗೊಳ್ಳಲು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕುಂದುಕೊರತೆ ಸಭೆಯನ್ನು ಪ್ರತಿಯೊಂದು ತಾಲ್ಲೂಕಿನಲ್ಲಿ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು. ವಿವಿಧ ರೀತಿಯ ಒಟ್ಟು 14 ಅರ್ಜಿಗಳು. ಅದರಲ್ಲಿ ಕಂದಾಯ ಇಲಾಖೆ 6, ತಾಲ್ಲೂಕು ಪಂಚಾಯತಿ 2, ನಗರಸಭೆ 1, ಅಬಕಾರಿ 1, ಶಿಕ್ಷಣ ಇಲಾಖೆ 1, ಆಹಾರ ಇಲಾಖೆ 1, ಎಸಿ‌ ಕಛೇರಿ 1, ಹಾಲು ಉತ್ಪಾದಕ ಸಹಕಾರ ಸಂಘ 1, ಸ್ವೀಕೃತ ಗೊಂಡಿದ್ದವು, ಕೆಲವು ಅರ್ಜಿಗಳು ಸ್ಥಳದಲ್ಲೇ ಪರಿಹರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಇನ್ಪೆಕ್ಟರ್ ಮೋಹನ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಲೋಕಾಯುಕ್ತ ಸಿಬ್ಬಂದಿಗಳಾದ ರಮೇಶ್, ಮ...

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆಯಲ್ಲಿ ಪ್ರತಿಜ್ಞೆ ವಿಧಿ ಭೋದಿಸಲಾಯಿತು

Image
    ಶಿಡ್ಲಘಟ್ಟ :ಎನ್ ಎಸ್ ಎಸ್ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ಗ್ರಾಮಗಳು ಉದ್ದಾರ ಆದರೆ ದೇಶ ಉದ್ದಾರ ಎಂದು ಅಭಿಪ್ರಾಯ ಪಟ್ಟವರು. ಮೊದಲು ಗ್ರಾಮಗಳು ಸಾಮಾಜಿಕ ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಸಮಸ್ಯೆಗಳಿಂದ ಹೊರಬರಬೇಕು ಜನರಲ್ಲಿ ಅರಿವು ಮೂಡಿಸುವ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಎನ್.ಎಸ್.ಎಸ್.1969ರಿಂದ ಸೆಪ್ಟೆಂಬರ್ ತಿಂಗಳಲ್ಲಿ 24ನ್ನು ಎನ್.ಎಸ್.ಎಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಯುವಕರು ದೇಶ ಕಟ್ಟುವ ಕೆಲಸವನ್ನು ಮಾಡಬೇಕು ಸಮಸ್ಯೆಗಳನ್ನು ಎದುರಿಸುವ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಹೆಚ್. ಸಿ. ಮುನಿರಾಜು ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಎನ್.ಎಸ್.ಎಸ್ ದಿನ ಆಚರಣೆ ಮಾಡಲಾಯಿತು. (ಬಾಕ್ಸ್) ಎನ್.ಎಸ್.ಎಸ್ ವಿದ್ಯಾರ್ಥಿಗಳು ಸ್ವಯಂ ಶಿಸ್ತನ್ನು ಬೆಳೆಸಿಕೊಂಡು ತಮ್ಮ ಸುತ್ತಮುತ್ತಲಿನ ಜನರಲ್ಲಿ ಸೃಚ್ಚತೆಯ ಅರಿವನ್ನು ಮೂಡಿಸಬೇಕು ಎಂದು ಪ್ರಾಂಶುಪಾಲರಾದ ಸಿ.ವೆಂಕಟಶಿವಾರೆಡ್ಡಿ, ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಲಕ್ಷ್ಮಯ್ಯ, ಹೆಚ್. ವಿ ಶಿವಾರೆಡ್ಡಿ, ಶ್ರೀಕೃಷ್ಣ ಪರಮಾತ್ಮ,ಚಂದ್ರಶೇಖರ್ ,ಅರ್ಚನ ,ರಮೇಶ್, ಶ್ರೀಧರ್, ಶಮಾ...

ಕಾವೇರಿ ನೀರಿಗಾಗಿ ಸೆ:29 ರಂದು ಬಂದ್ ಮಾಡಲು ಕನ್ನಡ ಸಂಘಟನೆ ಒಕ್ಕೂಟದ ವತೂ ಪೂರ್ವಭಾವಿ ಸಭೆ .

Image
ಶಿಡ್ಲಘಟ್ಟ -ಸೆ:29 ಕರ್ನಾಟಕ ಬಂದ್ ಮಾಡಲು ಶಿಡ್ಲಘಟ್ಟ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ವೇಣುಗೋಪಾಲಸ್ವಾಮಿ ಸನ್ನಿಧಾನದಲ್ಲಿ ಪೂರ್ವಭಾವಿ ಸಭೆ ಆಯೋಜನೆ.  ಈ ಸಭೆಯಲ್ಲಿ ತಾಲೂಕಿನ ಹಲವು ಸಂಘ ಸಂಸ್ಥೆಗಳು ಭಾಗಿಯಾಗಿ ಬಂದ್ ಮಾಡಲು ನಮ್ಮ ಸಹ ಮತವಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈ ಗೊಂಡು ಬಂದ್ ಯಶಸ್ವಿ ಮಾಡೋಣವೆಂದು ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಸಾಮೂಹಿಕವಾಗಿ ಸಹ ಮತ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ರೈತ ಸಂಘಟನೆಗಳ ಮುಖಂಡರು, ವರ್ತಕರು,ದಲಿತ ಸಂಘಟನೆಗಳು, ವಿದ್ಯಾರ್ಥಿಗಳು, ಆಟೋ ಚಾಲಕರು,ಕಾರ್ಮಿಕ ಸಂಘಟನೆಗಳು,ಹಾಗೂ ಇತರೆ ಖಾಸಗಿ ಶಾಲೆಗಳ ಸಂಸ್ಥೆಗಳು ಭಾಗಿಯಾಗಲು ತಿಳಿಸಿದರು. ಸೆ:29 ಶುಕ್ರವಾರ ಬೆಳಗ್ಗೆ 6 ಘಂಟೆಗೆ ಪಂಜಿನ ಮೆರವಣಿಗೆ ಮಾಡಿ ಬಂದ್ ಗೆ ಚಾಲನೆ ನಂತರ ಬೆಳಗ್ಗೆ ಹತ್ತು ಗಂಟೆಯ ನಂತರ ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಹಕರಿಸಲು ಎಲ್ಲಾ ಅಂಗಡಿ ಮುಂಗಟ್ಟುಗಳು ಮಾಲೀಕರಿಗೆ ಕಾವೇರಿ ನೀರು ಅರಿವು ಮೂಡಿಸಿ ಟಿಬಿ ರಸ್ತೆಯ ಮೂಲಕ ತಾಲ್ಲೂಕು ತಹಶೀಲ್ದಾರ್ ಬಿಎನ್ ಸ್ವಾಮಿ ರವರಿಗೆ ಮನವಿ ಪತ್ರವನ್ನು ನೀಡುವುದು ಕಾರ್ಯಕ್ರಮ ರೂಪರೇಷಗಳಾಗಿರುತ್ತಾದೆ ಎಂದು ಸಭೆಯಲ್ಲಿ ತಿಳಿಸಿದ ಒಕ್ಕೂಟದ ಮುಖಂಡರು. ಪೂರ್ವಭಾವಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ರೂಪಸಿ ರಮೇಶ್,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸ...

ಸಂಸದರನ್ನು ಅಗೌರವದಿಂದ ವರ್ತನೆ ಶಾಸಕ‌ ನಾರಾಯಣಸ್ವಾಮಿ ಮತ್ತು ಎಸ್ಪಿ ವಿರುದ್ಧ ಕಾನೂನು ಕ್ರಮ ಜರುಗಿಸಲು ತಹಶಿಲ್ದಾರ್ ಸ್ವಾಮಿಗೆ ಮನವಿ -ಬಿಜೆಪಿ ಮುಖಂಡ ರಾಮಚಂದ್ರಗೌಡ

Image
ಶಿಡ್ಲಘಟ್ಟ: ಶ್ರೀನಿವಾಸಪುರ ರೈತರಿಗೆ ಅನ್ಯಾಯವನ್ನು ಕೇಳಲು ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಹೋದಾಗ ಅಲ್ಲಿನ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ ಯವರು ಜನಪ್ರತಿನಿಧಿ ಎಂದು ತಿಳಿಯದೆ ಒಬ್ಬ ಸಂಸದರನ್ನು ಏಕವಚನದಲ್ಲಿ ನಿಂದಿಸಿ ಅವಮಾನ ಮಾಡಿ ಅವಾಚ್ಯ ಶಬ್ದ ಗಳಿಂದ ಬೈದಿರುತ್ತಾರೆ ಅವರ ಜೊತೆ ಎಸ್ಪಿ ಸಹ ಅವರಂತೆ ಕುಣಿದು ಗೇಟ್ ನಿಂದ ಹೊರಗೆ ಕಳಿಸಿರುವುದನ್ನು ಸಹಿಸಲಾಗುವುದಿಲ್ಲ ಅವರನ್ನು ಈ ಕೂಡಲೇ ಅಮಾನತ್ತು ಮಾಡಬೇಕು ಹಾಗೂ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಈ ದಲಿತ ವಿರೋಧಿ ರೈತ ವಿರೋಧಿ ಸರ್ಕಾರಕ್ಕೆ ನಮ್ಮ ಧಿಕ್ಕಾರವಿರಲಿ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರೇಗೌಡ ಆಕ್ರೋಶ ವ್ಯಕ್ತಪಡಿಸಿದರು . ಶಿಡ್ಲಘಟ್ಟದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕಸಭಾ ಸಂಸದರಿಗೆ ಆದ ಅವಮಾನವನ್ನು ಖಂಡಿಸಿ ಇಂದು ಶಿಡ್ಲಘಟ್ಟ ತಾಲೂಕು ಕಛೇರಿ ಮುಂದೆ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು.‌ ಈ ಕೃತ್ಯವನ್ನು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಬಿಎನ್ ಸ್ವಾಮಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣ, ಬಿಜೆಪಿ ಮುಖಂಡ ಆನಂದ ಗೌಡ, ಯುವನಾಯಕ ಭರತ್,ಹಾಗೂ ಹಲವು ಬಿಜೆಪಿ ಕಾರ್ಯಕರ್...

ಗಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ.

Image
ಶಿಡ್ಲಘಟ್ಟ :ತಾಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯ ಗಂಗಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀ ರಾಮಮೂರ್ತಿ, ಉಪಾಧ್ಯಕ್ಷರಾಗಿ ಅಶ್ವತಪ್ಪ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶಾಸಕರಾದ ಬಿಎನ್ ರವಿಕುಮಾರ್ ರವರು ಹೂಮಾಲೆ ಹಾಕಿ ಶುಭಾಶಯಗಳು ಕೋರಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಅಭಿವೃದ್ಧಿ ಪಡಿಸಲು ಸಲಹೆ ಸೂಚನೆಗಳನ್ನು ನೀಡಿದರು.  ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರಸ್ವತಮ್ಮ, ಜನಾರ್ದನ್ ರೆಡ್ಡಿ, ಫುಲಕುಂಟನಹಳ್ಳಿ ರಘುನಾಥ್ ರೆಡ್ಡಿ, ಅರವಿಂದ್ ರೆಡ್ಡಿ, ಎ.ರಾಮರೆಡ್ಡಿ, ನರಸಪ್ಪ, ಶಂಕ್ರಪ್ಪ, ಉಸ್ಮಾನ್, ಸಾಬ್ಚಂದ್ರರೆಡ್ಡಿ,ಮಂಜುನಾಥ್, ಚೊಕ್ಕನಹಳ್ಳಿ ಮೂರ್ತಿ, ಇನ್ನೂ ಹಲವು ಜೆಡಿಎಸ್ ಮುಖಂಡರು ಹಾಜರಿದ್ದರು.